ಮಾಧ್ಯಮ ಪ್ರೇಮಿ, ಯುವಕರ ಕಣ್ಮಣಿ ಎಂ.ಪಿ.ರವೀಂದ್ರ ಇನ್ನಿಲ್ಲ

ಹೂವಿನಹಡಗಲಿ :

        ಹೂವಿನಹಡಗಲಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಎಂದಿಗೂ ಕೂಡಾ ಮಾಧ್ಯಮ ಸ್ನೇಹಿತರೊಂದಿಗೆ ಅತ್ಯಂತ ಅನ್ಯೋನ್ಯವಾಗಿ ಆತ್ಮೀಯವಾಗಿ ಇದ್ದಂತಹ ಮಾಧ್ಯಮ ಪ್ರೇಮಿ ಹಾಗೂ ಯುವಕರ ಕಣ್ಮಣಿ ಮಾಜಿ ಶಾಸಕ ಎಂ.ಪಿ.ರವೀಂದ್ರ (49) ಇನ್ನಿಲ್ಲ.

         ಅವರು ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಲ್ಲಿ ಬಳಲುತ್ತಿದ್ದು, ಇತ್ತೀಚೆಗೆ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

        ಎಂ.ಪಿ.ರವೀಂದ್ರರವರು ಒಬ್ಬ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ವ್ಯಕ್ತಿತ್ವದವರಾಗಿದ್ದರು. ಯುವಕರು ರವೀಂದ್ರರವರನ್ನು ಒಬ್ಬ ಮಾದರಿನಾಯಕ ಎಂದು ಒಪ್ಪಿಕೊಂಡಿದ್ದರು. ಪ್ರಕಾಶರಷ್ಟು ಚಾಣಾಕ್ಷ್ಯ, ರಾಜಕಾರಣಿಯಲ್ಲದಿದ್ದರು ಎಂ.ಪಿ.ರವೀಂದ್ರ ಒಬ್ಬ ಸಂಘಟನಾ ಚತುರರಾಗಿದ್ದರು ಎನ್ನುವಲ್ಲಿ ಎರಡುಮಾತಿಲ್ಲ. ಇಂತಹ ಒಬ್ಬ ಕ್ರಿಯಾಶೀಲ ವ್ಯಕ್ತಿಯನ್ನು ಕಳೆದುಕೊಂಡ ಹೂವಿನಹಡಗಲಿ ಕ್ಷೇತ್ರ ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ. ನೇರ, ದಿಟ್ಟ ಮಾತುಗಳಿಂದ ಜನಪ್ರಿಯತೆ ಗಳಿಸಿದ್ದ ಎಂ.ಪಿ.ರವೀಂದ್ರರವರು ಎಂ.ಪಿ.ಪ್ರಕಾಶರಂತೆ ಜನಪ್ರಿಯತೆ ತುತ್ತ ತುದಿಯಲ್ಲಿ ನಿಂತು, ಪ್ರಕಾಶರ ಅನೇಕ ಅಪೂರ್ಣಗೊಂಡ ಕನಸುಗಳನ್ನು ಈಡೇರಿಸುವ ತವಕದಲ್ಲಿದ್ದರು ಆದರೆ, ಮನುಷ್ಯ ತಾನೊಂದು ಬಗೆದರೆ ವಿಧಿ ಇನ್ನೊಂದು ಬಗೆಯುವುದು ಎನ್ನುವಂತೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಎಂ.ಪಿ.ರವೀಂದ್ರರವರು ವಿಧಿವಶರಾಗಿರುವುದು ಅತ್ಯಂತ ದುಃಖದ ಸಂಗತಿ.

        ಇಂದು ಮಲ್ಲಿಗೆ ನಾಡಾದ ಹೂವಿನಹಡಗಲಿಯಲ್ಲಿ ದುಃಖ ಮಡುಗಟ್ಟಿದ್ದು, ಪ್ರತಿಬೀದಿಗಳಲ್ಲಿಯೂ ಕೂಡಾ ಎಂ.ಪಿ.ರವೀಂದ್ರರವರ ಪೋಟೋಗಳನ್ನಿಟ್ಟು ಶ್ರದ್ದಾಂಜಲಿ ಕಾರ್ಯಕ್ರಮಗಳನ್ನು ಅರ್ಪಿಸಿ ಅವರ ಆತ್ಮಕ್ಕೆ ಅಭಿಮಾನಿ ಬಳಗ ಶಾಂತಿಯನ್ನು ಕೋರುತ್ತಿದೆ.

         2013ರಲ್ಲಿ ಹರಪನಹಳ್ಳಿ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಅನೇಕ ಅಭಿವೃದ್ದಿಕಾರ್ಯಗಳನ್ನು ಕೈಗೊಂಡಂತಹ ಎಂ.ಪಿ.ರವೀಂದ್ರರವರು 2018ರ ಚುನಾವಣೆಯಲ್ಲಿ ಅಲ್ಪಮತದಿಂದ ಪರಾಭವಗೊಂಡಿದ್ದರು. ರಾಜಕೀಯದಲ್ಲಿ ಹಲವಾರು ಕನಸುಗಳನ್ನೊತ್ತು ಅರಳಬೇಕಾಗಿದ್ದ ಮಠದ ಪಾಟೀಲರ ಕುಟುಂಬದ ಕುಡಿ ಕಮರಿ ಹೋಗಿದ್ದು ಅತ್ಯಂತ ವಿಶಾದನೀಯ ಸಂಗತಿಯಾಗಿದೆ.
ಸಾಂಸ್ಕøತಿಕವಾಗಿ, ರಾಜಕೀಯವಾಗಿ ಸಮಾನ ದೃಷ್ಠಿಕೋನ ಹೊಂದಿದ್ದ ರವೀಂದ್ರರು, ರಾಜಕೀಯದಷ್ಟೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಆರೋಗ್ಯ ಶಿಕ್ಷಣ ಸೇರಿದಂತೆ ಮೊದಲಾದ ರಂಗಗಳಿಗೆ ಮಾನ್ಯತೆ ಕೊಡುತ್ತಾ ಬಂದಿದ್ದರು. 05-04-1969ರಲ್ಲಿ ಜನಿಸಿದ ಇವರು ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಬಿ.ಇ. ಸಿವಿಲ್ ಪದವೀಧರರು ಆಗಿದ್ದರು.

         2003ರಲ್ಲಿ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಎಂ.ಪಿ.ರವೀಂದ್ರರವರು, 01-10-2005 ರಿಂದ ನಾಲ್ಕುಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ 2005-06ನೇ ಸಾಲಿನಲ್ಲಿ 214.01ಲಕ್ಷ ವಿತರಣೆಯಾಗಿದ್ದ ಸಾಲ 2017-18ನೇ ಸಾಲಿಗೆ 750.10 ಲಕ್ಷ ವಿತರಣೆ ಮಾಡುವುದರ ಮೂಲಕ ಸಹಕಾರ ಸಂಘದಲ್ಲಿಯೂ ಸಹ ಅಭೂತಪೂರ್ವವಾದ ಸಾಧನೆಯನ್ನು ಮಾಡಿದ್ದರು.

         ಅಲ್ಲದೇ, ಸಹಕಾರ ಸಂಘಗಳಲ್ಲಿಯೂ ಸಹ ಗಣಕೀಕರಣಗೊಳಿಸುವ ಮೂಲಕ ಪಾರದರ್ಶಕ ಆಡಳಿತ ಮತ್ತು ರೈತ ಸದಸ್ಯರಿಗೆ ಹೈನುಗಾರಿಕೆ ಹಾಗೂ ಜಮೀನುಗಳ ನೀರಾವರಿ ಅಭಿವೃದ್ದಿಗಾಗಿ ಐ.ಪಿ.ಸೆಟ್ ಸಾಲ ವಿತರಣೆ ಮತ್ತು ಟ್ರ್ಯಾಕ್ಟರ್‍ಸಾಲಗಳನ್ನು ವಿತರಣೆ ಮಾಡುವುದರ ಮೂಲಕ ರೈತ ಸದಸ್ಯರ ಅಭಿವೃದ್ದಿಗಾಗಿಯೂ ಸಹ ಶ್ರಮಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link