ಹಾವೇರಿ :
ಶಿಂದಗಿ ವಕೀಲರು ಹಾಗೂ ಶಿಂದಗಿ ವಕೀಲರ ಸಂಘದ ಸಹಕಾರ್ಯದರ್ಶಿ ದತ್ತು ಎಲ್ ಬಂಡಿವಡ್ಡರ ಅವರ ಹತ್ಯೆ ಖಂಡಿಸಿ ನಗರದ ಜಿಲ್ಲಾ ನ್ಯಾಯಾಲಯದ ಮುಂಭಾಗದಲ್ಲಿ ಪ್ರತಿಭಟಿಸಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಕಲಾಪವನ್ನು ಬಹಿಷ್ಕರಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಕೆಸಿ ಪಾವಲಿ ಮಾತನಾಡಿ ನಮ್ಮ ವೃತ್ತಿ ಮಿತ್ರ ದತ್ತು ಬಂಡಿವಡ್ಡರ ಅವರನ್ನು ದುಷ್ಕರ್ಮಿಗಳು ಮನೆಗೆ ಹೋಗುವ ಮಾರ್ಗ ಮಧ್ಯ ಹತ್ಯೆ ಮಾಡಿರುವುದು ಖಂಡನೀಯ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ವಕೀಲರಿಗೆ ಭದ್ರತೆ ಇಲ್ಲದಿರುವುದು ಶೋಚನೀಯ. ಸರ್ಕಾರ ಹಾಗೂ ಪೋಲಿಸ್ ಇಲಾಖೆ ಈ ಕೃತ್ಯ ಮಾಡಿದವರನ್ನು ಕೂಡಲೇ ಬಂಧಿಸಿ, ಕುಟುಂಬ ವರ್ಗದವರಿಗೆ ಸೂಕ್ತ ನ್ಯಾಯ ಒದಗಿಸಬೇಕು.ಇಂತಹ ಘಟನೆ ಮುಂದೆ ಜರುಗದಂತೆ ಸೂಕ್ತ ರಕ್ಷಣೆಯ ಕ್ರಮಕೈಗೊಳ್ಳುವಂತಾಗಬೇಕು ಎಂದರು. ಈ ಸಂದರ್ಭದಲ್ಲಿ ವಕೀಲರುಗಳಾದ ಪಿಎಂ ಬೆನ್ನೂರ.ಬಸವರಾಜ ಹಾದಿಮನಿ.ಭರತೇಶ.ಟಿವ್ಹಿ ರಟ್ಟಿಹಳ್ಳಿ.ಎಂಸಿ ಭರಮಣ್ಣನವರ.ಎನ್‍ಎಸ್ ಪಾಟೀಲ.ಸಿಎಂ ಸುರಳ್ಳಿಹಳ್ಳಿ.ಜಿಎಸ್ ಗಿರಿಯಪ್ಪನವರ.ಕೆವಿ ನಡುವಿನಮಠ.ಎಸ್‍ಎಸ್ ಹಿರೇತನ.ಪಿ ಆರ್ ಮುಂಜೋಜಿ.ಜಗದೀಶ ಮಳಲಿ. ನಾರಾಯಣ ಕಾಳೆ ಸೇರಿದಂತೆ ನೂರಾರು ವಕೀಲರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ