ದಾವಣಗೆರೆ:
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಎರಡನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ದಾವಣಗೆರೆಯ ವಿನೊಬನಗರದ ಸಿದ್ದಿವಿನಾಯಕ ಕರಾಟೆ ಶಾಲೆಯ ಕರಾಟೆ ಪಟುಗಳು ಭಾಗವಹಿಸಿ ವಿಜೇತರಾಗಿದ್ದಾರೆ.
ಶಾಲೆಯ ಕರಾಟೆ ಪಟುಗಳಾದ ಅಂಕಿತ, ಲಾವಣ್ಯ, ರಂಜಿತ, ಸಿಂಚನ, ಮಾರುತಿ, ದ್ರುವ ಕುಮಾರ, ಚಿನ್ಮಯಿ ಹಾಗೂ ಸುರಜಿತ್ ಭಾಗವಹಿಸಿ, ಸುರಜಿತ್ ಪ್ರಥಮ ಹಾಗೂ ಚಿನ್ಮಯಿ ದ್ವಿತೀಯ ಮತ್ತು ಮುಂತಾದವರು ತೃತೀಯ ಸ್ಥಾನ ಪಡೆದಿದ್ದಾರೆ.
ಈ ವಿಜೇತ ಮಕ್ಕಳಿಗೆ ತರಬೇತುದಾರರಾದ ಸೆನ್ ಸಾಯಿ ಯುವರಾಜ್ ಎಸ್, ಸೆನ್ ಸಾಯಿ ರವಿ ನಾರಾಯಣ್ ಎಸ್ ಹಾಗೂ ಮುಖ್ಯ ತರಬೇತುದಾರ ಕಿಯೊಶಿ ಕೆ.ಪಿ.ಜೋಸ್ ಅಭಿನಂದಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








