ಜಗಳೂರು:
ರಾಜ್ಯವ್ಯಾಪಿ ಸರ್ಕಾರಿಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳಿಂದ ಸಹಿಸಂಗ್ರಹಣೆ ಆಂದೋಲನಕ್ಕೆ ಅಖಿಲಭಾರತವಿದ್ಯಾರ್ಥಿ ಫೆಡರೇಷನ್ (ಎಐಎಸ್ಎಫ್) ನೇತೃತ್ವದಲ್ಲಿ ಪಟ್ಟಣದ ಸರ್ಕಾರಿಪದವಿಪೂರ್ವಕಾಲೇಜಿನ ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳಿಂದ ಸಹಿಸಂಗ್ರಹ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಎಐಎಸ್ಎಫ್ ನ ರಾಜ್ಯಸಹಕಾರ್ಯದರ್ಶಿ ಮಾದಿಹಳ್ಳಿ ಕೆ.ಮಂಜಪ್ಪ ಚಾಲನೆ ನೀಡಿ ಮಾತನಾಡಿ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಸಮರ್ಪಕ ಮೂಲಭೂತ ಸೌಲಭ್ಯಕಲ್ಪಿಸಿ ವಿದ್ಯಾರ್ಥಿಗಳ ಸಂಖ್ಯೆಗಳನ್ನು ಹೆಚ್ಚಿಸಲು ಸರ್ಕಾರಿ ನೌಕರರ ಹಾಗೂ ಜನಪ್ರತಿನಿಧಿಗಳ ಮಕ್ಕಳು ವಿದ್ಯಾಬ್ಯಾಸ ಕೊಡಿಸುಲ್ಲಿ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮಾರ್ಚ2006ರ ಮಾಹಿತಿಯ ಪ್ರಕಾರ ಒಟ್ಟು 54529ಪ್ರಾಥಮಿಕಶಾಲೆ ಹಾಗೂ 9499 ಪ್ರೌಢಶಾಲೆಗಳಿದ್ದವು. ಅಂದಿನ ಸಂದರ್ಭದಲ್ಲಿ 9.879 ಮಿಲಿಯನ್ ವಿದ್ಯಾರ್ಥಿಗಳು ಅಬ್ಯಾಸಮಾಡುತ್ತಿದ್ದರು. ಆದರೆ 2014-15 ನಂತರದ ವರದಿಯ ಮಾಹಿತಿಯ ಪ್ರಕಾರ ಆರ್ಟಿಇ ಜಾರಿಯಾದ ನಂತರ 4864509 ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣವಾಗಿ 2016-17 ಕ್ಕೆ 4650349 ಕ್ಕೆ ಕ್ಷೀಣಿಸುವಮೂಲಕ 2.14 ಲಕ್ಷ ವಿದ್ಯಾರ್ಥಿಗಳು ಸರ್ಕಾರಿಶಾಲೆಗಳಿಂದ ಖಾಸಗಿಯತ್ತಮುಖಮಾಡಿ 1300 ಶಾಲೆಗಳು ಮುಚ್ಚುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಹಲವಾರು ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿವೆ ಹಾಗೂ ಶೌಚಾಲಯ ಕುಡಿಯುವನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ ಕೂಡಲೆ ಅಧಿಕಾರಿಗಳು ಸಮೀಕ್ಷೆನಡೆಸಿ ಅಗತ್ಯವಿರುವ ಶಾಲೆಗಳಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ ಹಲವು ಜಿಲ್ಲೆಗಳನ್ನು ಸಂಚರಿಸಿ ಸಾವಿರಾರು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಸಹಿಗಳ ಪಟ್ಟಿಯನ್ನು ಎಐಎಸ್ಎಫ್ ನ ರಾಜ್ಯ ಸಮಿತಿಯನಿಯೋಗದ ಮೂಲಕ ನವೆಂಬರ್ 25 ರನಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಎಐಎಸ್ಎಫ್ ನರಾಜ್ಯ ಉಪಾದ್ಯಕ್ಷೆ ಎಲ್ ವೀಣಾ ಮಾತನಾಡಿ,ಶೈಕ್ಷಣಿಕ ಹಕ್ಕು ಸಂವಿಧಾನಬದ್ದಹಕ್ಕಾಗಿದ್ದು ಗ್ರಾಮೀಣಬಾಗದ ಪ್ರತಿಯೊಬ್ಬ ಬಡ ಶೊಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತಹಾಗೂ ಕಡ್ಡಾಯ ಶಿಕ್ಷಣಕೊಡಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.
ಎಐಎಸ್ಎಫ್ ನ ಜಿಲ್ಲಾ ಕಾರ್ಯದರ್ಶಿ ಕೊಟ್ರೇಶ್ ಮುಂಡರಗಿಮಠ್ ಮಾತನಾಡಿ ಆಡಳಿತ ಸರ್ಕಾರಗಳು ಪ್ರತಿವರ್ಷ ಬಜೆಟ್ ನಲ್ಲಿ ಹಣಮೀಸಲಿಟ್ಟದ್ದು ಸರಿಯಾಗಿ ತಲುಪುತ್ತಿಲ್ಲ ಹಾಗೂ ಅಕ್ಷರದಾಸೋಹ,ಶೂಭಾಗ್ಯ,ಸೈಕಲ್ ವಿತರಣೆ,ಬೇಸಿಗೆ ಶಿಬಿರಗಳು ಬಾಲಕಾರ್ಮಿಕರನ್ನು ಮತ್ತು ಶಾಲೆಬಿಟ್ಟ ಮಕ್ಕಳನ್ನು ಕರೆತರಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗಳು ಕ್ಷೀಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಗ್ರಾಮೀಣಬಾಗದಲ್ಲಿ ಶಿಕ್ಷಕರು ಸೇವೆ ಸಲ್ಲಿಸಲು ತಾತ್ಸಾರಗೊಂಡು ತಮ್ಮ ಅನುಕೂಲಕ್ಕಾಗಿ ಪಟ್ಟಣದ ಮೊರೆ ಹೋಗುತ್ತಿದ್ದಾರೆ.ಅಲ್ಲದೇ ಸರ್ಕಾರ ಮಾತ್ರ ಪ್ರತಿವರ್ಷನೇಮಕಾತಿ ಪ್ರಕ್ರಿಯೆ ಕೈಗೊಳ್ಳದೆ ಹೊರಗುತ್ತಿಗೆ ಆದಾರದ ಮೇಲೆ ನಿಯೋಜಿಸಿ ಗುಣಮಟ್ಟದ ಶಿಕ್ಷಣ ಕಾಪಾಡುವಲ್ಲಿ ಮೀನಾಮೇಶ ಎಣಿಸುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ದಲಿತಮುಖಂಡ ನಾಗಲಿಂಗಪ್ಪ , ಎಐಎಸ್ಎಫ್ ನ ತಾಲೂಕು ಅಧ್ಯಕ್ಷ ಯುವರಾಜ್ ಹೆಚ್.ಹೆಮ್.ಹೊಳೆ ಕಾರ್ಯದರ್ಶಿ ಸಿರಿಬಿ ಕೆ. ತಿಪ್ಪೇಸ್ವಾಮಿ ದಲಿತ ಒಕ್ಕೂಟದ ಅಧ್ಯಕ್ಷ ರಾಜಪ್ಪವ್ಯಾಸಗೊಂಡನಹಳ್ಳಿ. ಪದಾದಿಕಾರಿಗಳಾದ ತೋರಣಗಟ್ಟೆ ಮನೋಜ್ ಮೇಘನ, ಐಶ್ವರ್ಯ ರಶ್ಮಿ ಶೋಭಾ ಸಂತೋಷ ಹೆಗ್ಗೇರೆ ಸೇರಿದಂತೆ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








