ಬೆಂಗಳೂರು: 
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಮಂಗಳವಾರ ಹೊರಬೀಳಲಿದ್ದು, ಮೂರೂ ಪಕ್ಷಗಳ ಮುಂಚೂಣಿ ನಾಯಕರ ರಾಜಕೀಯ ಬಲಾಬಲವನ್ನು ನಿರ್ಧರಿಸಲಿದೆ.
ಮತ ಎಣಿಕೆ ಸಿಬ್ಬಂದಿಗೆ ಈಗಾಗಲೇ ಅಗತ್ಯ ತರಬೇತಿ ನೀಡಲಾಗಿದ್ದು, ಮತ ಎಣಿಕೆಗೆ 16 ಟೇಬಲ್ ಗಳು, 28 ಮತ ಎಣಿಕೆಯ ಅಧಿಕಾರಿಗಳು ಹಾಗೂ 14ಜನ ಮತ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದ್ದು, ಅಗತ್ಯ ತರಬೇತಿಯನ್ನು ನೀಡಲಾಗಿದೆ.
ಮತ ಎಣಿಕೆಯು ಸುಗಮವಾಗಿ ನಡೆಯಲು ಪ್ರತ್ಯೇಕವಾಗಿ ಕೊಠಡಿಗಳು, ಪ್ರತಿಹಂತದ ಎಣಿಕೆಗೆ ಪೂರಕವಾಗಿ ಟೇಬಲ್ ಗಳು, ಸಿಬ್ಬಂದಿಗಳು, ರಕ್ಷಣಾ ಸಿಬ್ಬಂದಿಗಳು, ವೀಕ್ಷಕರು, ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಬೆಳಿಗ್ಗೆ 8ಗಂಟೆಯಿಂದಲೇ ಎಣಿಕೆ ಆರಂಭಗೊಳ್ಳುತ್ತಿದ್ದು, ಅಂಚೆ ಮತಗಳೊಂದಿಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಈ ಮತ ಎಣಿಕೆಯು ಸುಮಾರು 8.20ಕ್ಕೆ ಮುಕ್ತಾಯಗೊಳ್ಳುತ್ತಿದ್ದಂತೆಯೇ ವಿದ್ಯುನ್ಮಾನ ಮತಯಂತ್ರದಲ್ಲಿ ದಾಖಲಿಸಲಾದ ಮತಗಳ ಎಣಿಕೆಯ ಕಾರ್ಯ ಆರಂಭಗೊಳ್ಳಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








