ಚಿತ್ರದುರ್ಗ
” ಆಯುರ್ವೇದದಲ್ಲಿ ಮನುಷ್ಯನ ಹಲವಾರು ರೋಗಗಳಿಗೆ ಉತ್ತಮ ಗುಣಮಟ್ಟದ ಔಷಧಗಳಿವೆ, ಅಲೋಪತಿಯಲ್ಲಿ ರೋಗ ಹೋಗಲಾಡಿಸಲು ಔಷಧ ತೆಗೆದುಕೊಂಡಾಗ ರೋಗವಾಸಿಯಾಗುವುದರ ಜೊತೆಗೆ ಅಡ್ಡಪರಿಣಾಮದಿಂದಾಗಿ ಇನ್ನೊಂದು ರೋಗ ಉಡುಗೊರೆಯಾಗಿ ಸಿಗುತ್ತದೆ, ಆದರೆ ಆಯುರ್ವೇದದಲ್ಲಿ ಅಂತಹ ಯಾವುದೇ ದುಷ್ಪರಿಣಾಮ ಇರುವುದಿಲ್ಲ,
ಕೊಟ್ಟ ಔಷಧಿಗೆ ಖಾಯಿಲೆ ವಾಸಿಯಾಗಬೇಕೆ ಹೊರತ್ತು ಇನ್ನೊಂದು ಖಾಯಿಲೆ ಉಚಿತವಾಗಿ ನೀಡಬಾರದು, ಆದ್ದರಿಂದ ಜನರಲ್ಲಿ ಆಯುರ್ವೇದ ಔಷಧ ನಿಧಾನಗತಿಯಲ್ಲಿ ರೋಗ ನಿವಾರಣೆ ಮಾಡುತ್ತದೆ ತಾತ್ಸರ ಬೇಡ, ಆಯುರ್ವೇದ ಔಷಧ ಖಾಯಿಲೆ ವಾಸಿಮಾಡುವುದು ನಿಧಾನವಾದರೂ ಅದನ್ನು ಬುಡಸಮೇತ ವಾಸಿಮಾಡುತ್ತದೆ. ” ಎಂದು ಚಿತ್ರದುರ್ಗ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನಪ್ಪ ಅಭಿಪ್ರಾಯ ಪಟ್ಟರು.
ಅವರು ಇಂದು ಚಿತ್ರದುರ್ಗ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಭಾರತ್ ಸ್ವಾಭಿಮಾನ್ ಟ್ರಸ್ಟ್ ಹಾಗೂ ಶ್ರೀ ವೀರಭದ್ರೇಶ್ವರ ಪತಂಜಲಿ ಯೋಗ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ ರಾಷ್ಟ್ರೀಯ ಆಯುರ್ವೇದ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಡಿದ ಅವರು ಆಯುರ್ವೇದದಲ್ಲಿ ಅಲೋವೆರಾ ಅಥವಾ ಲೋಳೆಸರ ಮನುಷ್ಯನಿಗೆ ಬರುವ ಉರಿಯೂತ, ಸಂಧಿವಾತ ಶಮನಗೊಳಿಸುತ್ತದೆ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತದೆ, ದೇಹದ ಹುಣ್ಣುಗಳು ಕ್ರೋನ್ಸ್ ರೋಗ ಮತ್ತು ಇತರ ಜೀರ್ಣಾಂಗ ಕಾಯಿಲೆಗಳನ್ನು ಶಮನಗೊಳಿಸುತ್ತದೆ, ಜೀರ್ಣಾಂಗದ ಸಾಮರ್ಥ್ಯವನ್ನು ವೃದ್ಧಿಸುತ್ತದೆ ,
ದಿನಕ್ಕೆ ಒಂದು ಗ್ಲಾಸ್ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯ ಬೊಜ್ಜು ಕರಗಿ ತೂಕ ಕಡಿಮೆಯಾಗುವುದು” ಎಂದು ತಿಳಿಸುತ್ತಾ ಆಯುರ್ವೇದ ಔಷಧ, ಗಿಡಮೂಲಿಕೆಗಳ ಹಲವಾರು ಪ್ರಾತ್ಯಕ್ಷಿಕೆಯನ್ನು ತೋರಿಸಿದರು.
ಕಾರ್ಯಕ್ರಮದಲ್ಲಿ ಭಾಗವಾಗದ್ದ ಹರಿದ್ವಾರದ ಪತಂಜಲಿ ಯೋಗ ಪೀಠದ ಯೋಗ ಗುರುಗಳಾದ ರವಿ ಕೆ.ಅಂಬೇಕರ್ ಮಾತನಾಡಿ ” ಯೋಗ ಮತ್ತು ಆಯುರ್ವೇದ ಔಷಧೀಯ ಪ್ರಕ್ರಿಯೆ ಹಾಗೂ ಗಿಡಮೂಲಿಕೆ ಮೇಲೆ ನಮ್ಮ ಭಾರತದ ಪೂರ್ವಜರು, ಋಷಿಮುನಿಗಳು ಸಾವಿರಾರು ವರ್ಷಗಳಿಂದ ನಿರಂತರವಾಗಿ ಸಂಶೋಧನೆ ಮಾಡುತ್ತಾ ಬಂದಿದ್ದಾರೆ ಅವರ ಒಂದು ಪರಿಶ್ರಮದಿಂದಾಗಿ ಇಂದು ಭಾರತ ಆಯುರ್ವೇದ ಕ್ಷೇತ್ರದಲ್ಲಿ ತನ್ನದೇಆದ ಛಾಪನ್ನು ಮೂಡಿಸಿ ಯೋಗ ಹಾಗೂ ಆಯುರ್ವೇದದಲ್ಲಿ ಭಾರತ ವಿಶ್ವಗುರುವಾಗಿ ರಾರಾಜಿಸುತ್ತಿದೆ ” ಎಂದು ಅಭಿಪ್ರಾಯ ಪಟ್ಟರು.
ಗ್ರಾಮದ ಅಡಿಕೆ ಉದ್ಯಮಿ ಪ್ರಭಾಕರ್ ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಮಂಜುನಾಥ್, ಶೃತಿನಾಗಭೂಷಣ್ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








