ಬಳ್ಳಾರಿ:
ಹಲವು ದಿನಗಳಿಂದ ಕಣ್ಮರೆಯಾಗಿರುವ ಗಣಿಧಣಿಗೆ ಬಲೆ ಬೀಸಿರುವ ಸಿಸಿಬಿ ಪೊಲೀಸ್ ಅಧಿಕಾರಿಗಳು, ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿಯ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ನಗರದ ಅಹಂಬಾವಿ ಪ್ರದೇಶದಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿರೋ 10 ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಬೆಂಗಳೂರಿನಿಂದ ಎರಡು ವಾಹನಗಳಲ್ಲಿ ಮಂಜುನಾಥ ಚೌದರಿ ನೇತೃತ್ವದ ಹತ್ತುಮಂದಿ ಅಧಿಕಾರಿಗಳ ತಂಡವು ರೆಡ್ಡಿ ಮಾವ ಪರಮೇಶ್ವರ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಸಿಸಿಬಿ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ಆರಂಭಿಸಿದ್ದಾರೆ.
ನೆರವಿಗೆ ಬಂದ ಶ್ರೀರಾಮುಲು:
ಬೆಂಗಳೂರಿನಿಂದ ಆಗಮಿಸಿರುವ ಸಿಸಿಬಿ ಪೊಲೀಸರ ದಾಳಿ ವಿಷಯ ತಿಳಿದ ಕೂಡಲೇ ರೆಡ್ಡಿ ನಿವಾಸಕ್ಕೆ ಶ್ರೀರಾಮುಲು ಆಗಮಿಸಿದರು.