ಎಂ ಎನ್ ಕೋಟೆ :
ಯುವಜನತೆ ಕ್ರೀಡೆಯನ್ನು ನಿರಂತರ ಅಭ್ಯಾಸ ಮಾಡುವುದರಿಂದ ಆರೋಗ್ಯವನ್ನು ಕಪಾಡಿಕೊಳ್ಳಬಹುದು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ತಾಲ್ಲೂಕಿನ ಅದಲಗೆರೆ ಸಿದ್ಧಗಂಗಾ ಫ್ರೌಢಶಾಲೆ ಆವರಣದಲ್ಲಿ ನೆಹರು ಯುವ ಕೇಂದ್ರ ತುಮಕೂರು, ಸಿದ್ದು ಯುವಕ ಸಂಘ ಹಾಗೂ ಶ್ರೀಸೇವಾಲಾಲ್ ಯುವಕರ ಸಂಘದ ಆಸ್ರಯದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಸಮುದಾಯವು ಗ್ರಾಮೀಣಾಪ್ರದೇಶದಲ್ಲಿ ಯುವಕರು ಸಂಘಟಿತರಾಗಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಿದರೆ ತಮ್ಮ ಗ್ರಾಮವನ್ನು ಅಭಿವೃದ್ದಿಯತ್ತ ಕೋಡೊಯ್ಯಲು ಸಹಕಾರಿಯಾಗುತ್ತದೆ.
ರಾಮಕೃಷ್ಣ ಆಶ್ರಮದ ಧೀರಾನಂದ ಮಹಾರಾಜ್‍ಸ್ವಾಮಿಜಿ ಮಾತನಾಡಿ, ಯುವಕರು ಕ್ರೀಡೆ ಮತ್ತು ಜ್ಞಾನದಿಂದ ಬಲಿಷ್ಠ ಭಾರತವನ್ನು ನಿರ್ಮಿಸುವ ಸಾಧ್ಯ. ಈ ನಿಟ್ಟಿನಲ್ಲಿ ಜ್ಞಾನಾರ್ಜನೆಗೆ ಸದಾ ಮುಂದಾಗಬೇಕು ಎಂದರು.
ಸಿದ್ಧಗಂಗಾ ಫ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ್ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮೂಲಮಂತ್ರದೊಂದಿಗೆ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಹಾಗೂ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ವಿದ್ಯಾರ್ಥಿಗಳು ತೋರಿಸಿಕೊಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಫ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ್, ದೈಹಿಕ ಶಿಕ್ಷಕ ಸಿದ್ಧರಾಮಯ್ಯ , ಯುವಕ ಸಂಘದ ಪದಾಧಿಕಾರಿಗಳಾದ ಮಧುಸೂದನ್.ಕೆ. ಪ್ರಸನ್ನಕುಮಾರ್, ಶಿವಣ್ಣ, ದೊರೆಸ್ವಾಮಿ, ಚೇತನ್, ವಿಶ್ವನಾಥ್, ಮೋಹನ್ ಕುಮಾರ್ ಮತ್ತಿತರರು ಇದ್ದರು.
