30ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ, ಬಿಡುಗಡೆ

ದಾವಣಗೆರೆ:

         ರಾಜ್ಯ ಸರ್ಕಾರದಿಂದ ಆಚರಿಸುತ್ತಿರುವ ಟಿಪ್ಪು ಜಯಂತಿ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ, ಪ್ರತಿಭಟಿಸಲು ಯತ್ನಿಸಿದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೆÇಲೀಸರು, ಮುಂಜಾಗೃತ ಕ್ರಮವಾಗಿ ಬಂಧಿಸಿ, ಬಿಡುಗಡೆ ಗೊಳಿಸಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ.

         ನಗರದ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಹಣೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ಕಾರ್ಯಕ್ರಮ ನಡೆಯುತ್ತಿದ್ದ ಹೈಸ್ಕೂಲ್ ಮೈದಾನದತ್ತ ನುಗ್ಗಲು ಯತ್ನಿಸಿದರು. ಹೀಗಾಗಿ ಪೊಲೀಸರು ಮುಂಜಾಗ್ರತ ಕ್ರಮವಾಗಿ ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.

        ಪ್ರತಿಭಟನಾಕಾರರು ಪ್ರತಿಭಟನೆಯ ವೇಳೆಯಲ್ಲಿ ಮತಾಂಧ, ಹಿಂದೂ ವಿರೋಧಿ, ಹಿಂದು ದೇವಾಲಯಗಳ ಭಂಜಕ ಟಿಪ್ಪು ಸುಲ್ತಾನ್ ಜಯಂತಿಗೆ ಧಿಕ್ಕಾರ ಎಂಬುದಾಗಿ ಘೋಷಣೆ ಕೂಗಿದಲ್ಲದೇ, ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಟಿಪ್ಪು ಒಬ್ಬ ದೇಶ ದ್ರೋಹಿಯಾಗಿದ್ದು, 37 ಸಾವಿರಕ್ಕೂ ಅಧಿಕ ಕೊಡವರ ನರಮೇಧ ಮಾಡಿದ್ದಾನೆ. ಅಮಾಯಕ ಹಿಂದುಗಳನ್ನು ಹತ್ಯೆ ಮಾಡಿದ, ಹಿಂದು ದೇವಸ್ಥಾನಗಳನ್ನು ನಾಶ ಮಾಡಿದಂತಹ ಮತಾಂಧನಾಗಿದ್ದಾನೆ. ಇಂತಹ ಹಿನ್ನೆಲೆ ಹೊಂದಿರುವ ಟಿಪ್ಪುವಿಗೆ ದೇಶಪ್ರೇಮಿಯ ಪಟ್ಟ ಕಟ್ಟಲು ಮುಂದಾಗಿರುವುದು ನಿಜಕ್ಕೂ ಹಾಸ್ಯಸ್ಪದವಾಗಿದೆ ಎಂದು ಕಿಡಿಕಾರಿದರು.

        ಮುಂಚಿನಿಂದಲೂ ಟಿಪ್ಪು ಜಯಂತಿ ವಿರೋ„ಸಿಕೊಂಡೇ ಬಂದಿದ್ದರೂ ಕಾಂಗ್ರೆಸ್ ಮತ್ತು ಈಗಿನ ಮೈತ್ರಿ ಸರ್ಕಾರ ತಮ್ಮ ಮತ ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿವೆ. 3 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತನ ಹತ್ಯೆಯಾದಾಗ ಮೃತನ ಮನೆಗೆ ತೆರಳಿದ್ದ ಈಗಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಟಿಪ್ಪು ಜಯಂತಿ ವಿರೋಧಿಸಿದ್ದರು. ಈಗ ಸಿಎಂ ಆಗಿದ್ದರೂ ಟಿಪ್ಪು ಜಯಂತಿಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

        ಪ್ರತಿಭಟನೆಯಲ್ಲಿ ತೊಡಗಿದ್ದ ಬಿಜೆಪಿ, ಸಂಘ ಪರಿವಾರದ ಮುಖಂಡರಾದ ರಾಜನಹಳ್ಳಿ ಶಿವಕುಮಾರ, ಪಿ.ಸಿ.ಶ್ರೀನಿವಾಸ, ಎನ್.ರಾಜಶೇಖರ, ಎಸ್.ಟಿ.ವೀರೇಶ, ಸತೀಶ ಪೂಜಾರಿ, ಮೋಹನ, ಬೇಕರಿ ರಾಜು, ರಾಕೇಶ ಜಾಧವ್, ಮಲ್ಲಿಕಾರ್ಜುನ, ಮಂಜುನಾಥ, ಶಂಕರಗೌಡ ಬಿರಾದರ್, ಶಿವನಗೌಡ ಪಾಟೀಲ, ಶ್ರೀಕಾಂತ, ನವೀನ ಕುಮಾರ, ರಾಕೇಶ, ಚಂದ್ರು, ಪುಲೈ, ಶಶಿಕುಮಾರ, ಪ್ರಕಾಶ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಇಲ್ಲಿನ ಕವಾಯಿತು ಮೈದಾನಕ್ಕೆ ಕರೆದೊಯ್ದು, ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆ ಮಾಡಿದಚರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link