ಹೊನ್ನಾಳಿ:
ಬಿರು ಬಿಸಿಲಿನ ಬೇಗೆಗೆ ರಾಜ್ಯಾದ್ಯಂತ ಜನ-ಜಾನುವಾರು ಕಂಗಾಲಾಗಿವೆ. ಇದರ ಪರಿಣಾಮವೇನೋ ಎಂಬಂತೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹೋಟೆಲ್ ಸಪ್ತಗಿರಿ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ನೀರಿಲ್ಲದೇ ಒಣಗಿ ಹೋಗಿದೆ. ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ದಾಹ ತಣಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರೇ ಇಲ್ಲ. ಈ ಕಾರಣದಿಂದ ಪ್ರಯಾಣಿಕರು ನೀರಿಗಾಗಿ ಹೋಟೆಲ್‍ಗಳಿಗೆ ಎಡತಾಕುವ ಸ್ಥಿತಿ ನಿರ್ಮಾಣವಾಗಿದೆ. ಹೋಟೆಲ್‍ಗೆ ಹೋಗುವವರು ಕೇವಲ ನೀರು ಕುಡಿದು ಬರುವಂಥ ಸ್ಥಿತಿ ಉದ್ಭವಿಸುವುದಿಲ್ಲ.
ನೀರು ಕುಡಿಯಲು ಹೋಗುವವರು ಅನಿವಾರ್ಯವಾಗಿ ಏನಾದರೂ ಉಪಾಹಾರ ಸೇವಿಸುವ ಇಲ್ಲವೇ ಚಹಾ ಸೇವಿಸುವ ಅನಿವಾರ್ಯತೆ ಉಂಟಾಗುತ್ತದೆ. ಇದು ಜನತೆಯ ಹಣ ಅನವಶ್ಯಕವಾಗಿ ವ್ಯಯವಾಗಲು ದಾರಿ ಮಾಡಿಕೊಡುತ್ತದೆ.ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಿಸಬೇಕಿದ್ದ ಪಪಂ ಕಣ್ಣುಮುಚ್ಚಿ ಕುಳಿತಿದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ನೊಂದವರು ಒತ್ತಾಯಿಸುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
