ಎರಡು ದ್ವೀಚಕ್ರ ವಾಹನಗಳ ನಡುವೆ ಅಪಘಾತ

ಕೊರಟಗೆರೆ:-

       ಎರಡು ದ್ವೀಚಕ್ರ ವಾಹನಗಳ ನಡುವೆಅಪಘಾತವಾಗಿ ದ್ವೀಚಕ್ರ ವಾಹನದ ಹಿಂಬದಿ ಸವಾರನಿಗೆತೀವ್ರ ಪೆಟ್ಟಾಗಿ, ಹೆಚ್ಚಿನಚಿಕಿತ್ಸೆಗೆ ಬೆಂಗಳೂರಿನ ಮೇಗ್ಗಾಸ್ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಿದರಾದರೂ ಫಲಕಾರಿಆಗದೇ ಮೃತ ಪಟ್ಟಿರುವಘಟನೆ ಸೋಮವಾರಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿಜರುಗಿದೆ.

          ಕೊರಟಗೆರೆ ಪಟ್ಟಣದಊರ್ಡಿಗೆರೆಕ್ರಾಸ್‍ನ ಸಮೀಪ ಈ ದುರ್ಘಟನೆಜರುಗಿದ್ದು,ತುಮಕೂರುತಾಲೂಕಿನ ಎಚ್.ಎನ್.ಹಳ್ಳಿ ಗ್ರಾಮದ ವಾಸಿಯಾದ ಹೇಮಂತಕುಮಾರ್(19) ಮೃತ ಪಟ್ಟದುರ್ಧೈವಿ ಆಗಿದ್ದು, ಕೆಶಿಪ್ ನ ಕಾಮಗಾರಿ ಪೂರ್ಣಗೊಳ್ಳದ ಕಾರಣ ದುರಸ್ಥಿಯಲ್ಲಿದ್ದ ರಸ್ತೆ ಗಮನಿಸದೆ ಈ ದುರ್ಘಟನೆಜರುಗಿದೆಎನ್ನಲಾಗಿದೆ.

        ಮಧುಗಿರಿಯತನ್ನ ಸ್ನೇಹಿತನ ಮಧುವೆಗೆಂದು ನ.8ರಂದು ಬಂದು ಹಿಂದಿರುಗುವ ವೇಳೆ ಊರ್ಡಿಗೆರೆ ಬಳಿಯ ಅವೈಜ್ಞಾನಿಕ ಕೇಶಿಪ್ ರಸ್ತೆಯತಿರುವಿನಲ್ಲಿಅಪಘಾತವಾಗಿದೆ.ಕೇಶಿಪ್ ರಸ್ತೆ ಪೂರ್ಣಆಗದೇ ವಾಹನ ಸಂಚಾರಕ್ಕೆ ಬಿಟ್ಟಿರುವ ಹಿನ್ನಲೆ ವಾಹನ ಸವಾರರಿಗೆಅಪಘಾತದ ಮುನ್ಸೂಚನೆ ತಿಳಿಯದೇ ಮುಂದೆ ಚಲಿಸುತ್ತೀದ್ದ ವಾಹನಕ್ಕೆ ಹಿಂದಿನ ದ್ವೀಚಕ್ರ ವಾಹನ ಡಿಕ್ಕಿ ಹೊಡೆದುಅಪಘಾತಆಗಿದೆಎನ್ನಲಾಗಿದೆ.

         ಮುಂಬದಿಯಲ್ಲಿ ಚಲಿಸುತ್ತೀದ್ದ ದ್ವೀಚಕ್ರ ವಾಹನದಲ್ಲಿದ್ದ ಹಿಂಬದಿ ಸವಾರತುಮಕೂರು ಹೆಚ್.ಎನ್.ಹಳ್ಳಿ ಗ್ರಾಮದ ವಾಸಿ ಧರಣೇಶ್ ಎಂಬುವನಿಗೆ ಕಾಲು ಮುರಿದುತುಮಕೂರು ಸರಕಾರಿಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತೀದ್ದಾನೆಎನ್ನಲಾಗಿದೆ, ಈ ಸಂಬಂದಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಸ್ಥಳಕ್ಕೆ ಪಿಎಸೈ ಮಂಜುನಾಥ ಬೇಟಿ ನೀಡಿತನಿಖೆ ನಡೆಸುತ್ತಿದ್ದಾರೆಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link