ತಿಪಟೂರು
ದೀಪದ ಬುಡದಲ್ಲಿ ಕತ್ತಲು ಎಂಬಂತೆ ಕಾಣುತ್ತಿರುವ ತಾಲ್ಲೂಕು ಗ್ರಂಥಾಲಯ. ನಗರವನ್ನೇ ಸ್ವಚ್ಛಗೊಳಿಸಿ ಸುಂದರವಾಗಿಡುವ ನಗರಸಭೆಯ ಆವರಣದಲ್ಲೇ ಇರುವ ಗ್ರಂಥಾಲಯವು ಗಬ್ಬು ನಾರುತ್ತಿದ್ದರೂ ನಗರಸಭೆಯವರು ಇದರ ಬಗ್ಗೆ ಗಮನಹರಿಸದಿರುವುದು ವಿಪರ್ಯಾಸವಾಗಿದೆ.
ನಗರಸಭೆ ಪಕ್ಕ ಕಂಡೂ ಕಾಣದಂತಿರುವ ತಾಲ್ಲೂಕು ಗ್ರಂಥಾಲಯವು ತಿಳಿದವರಿಗೆ ಮಾತ್ರ ಗೊತ್ತಿದ್ದು ಸಾಕಷ್ಟು ಪುಸ್ತಕ ಭಂಡಾರವನ್ನು ಹೊಂದಿದ್ದು ಸಾವಿರಾರು ಜನರ ಜ್ಞಾನದಾಹವನ್ನು ತಣಿಸುತ್ತಿದೆ. ಆದರೆ ಇಲ್ಲಿರುವ ಶೌಚಾಲಯದ ಗುಂಡಿಯು ತುಂಬಿ ಹರಿಯುತ್ತಿದ್ದು ಗಬ್ಬುನಾರುತ್ತಿದೆ. ಇತ್ತೀಚೆಗೆ ಇದನ್ನು ದುರಸ್ತಿಗೊಳಿಸಿದ್ದು ಗ್ರಂಥಾಲಯದ ಮುಂಭಾಗಕ್ಕೆ ಕಾಂಕ್ರಿಟ್ ಹಾಕಿಸಿದ್ದಾರೆ.
ಈಗ ಮತ್ತೆ ಶೌಚಾಲಯದ ಗುಂಡಿಯು ತುಂಬಿ ಹರಿಯುತ್ತಿದ್ದು ಮತ್ತೆ ಕಾಂಕ್ರಿಟ್ ಕಿತ್ತುಹೋಗುವ ಸಂಭವವಿದ್ದು ಶೀಘ್ರವಾಗಿ ನಗರಸಭೆಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸೂಕ್ತವಾದ ಕ್ರಮವಹಿಸಿ ಜ್ಞಾನದಹಿಗಳು ಸ್ವಚ್ಛಪರಿಸರದಲ್ಲಿ ಕುಳಿತು ಓದಲು ಅನುವುಮಾಡಿಕೊಡ ಬೇಕೆಂದು ಓದುಗರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
