ತುಮಕೂರು: ಲೋಕಸಭಾ ಅಭ್ಯರ್ಥಿಯನ್ನು ಆಯ್ಕೆ ಜವಾಬ್ದಾರಿ ಸಚಿವರ ಹೆಗಲಿಗೆ……!

ಮಧುಗಿರಿ :

   ತುಮಕೂರು ಲೋಕಸಭಾ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತಹ ಜವಾಬ್ಧಾರಿ ಯನ್ನು ಸಹಕಾರಿ ಸಚಿವರು ಹಾಗೂ ಗೃಹ ಸಚಿವರಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ನೀಡಿದ್ದಾರೆಂದು ತಿಳಿದು ಬಂದಿದೆ.

    ಬೆಂಗಳೂರಿನ ರೆಯಾಡಿಸನ್ ಖಾಸಗಿ ಹೋಟೆಲ್ ನಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹಸಚಿವರು ಹಾಗೂ ಕೊರಟಗೆರೆ ಶಾಸಕರಾದ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಮತ್ತು ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ನವರ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.

    2024 ರ ಲೋಕಸಭಾ ಚುನಾವಣಾ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಅಭ್ಯರ್ಥಿ ಯನ್ನು ಆಯ್ಕೆ ಮಾಡುವ ಜವಾಬ್ದಾರಿ ಯನ್ನು ಅಂತಿಮವಾಗಿ ಇಬ್ಬರು ಸಚಿವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದ್ದು ಇಬ್ಬರು ಸಚಿವರು ಗಳು ಜಿಲ್ಲಾ ಮುಖಂಡರ ಮನವಿಗೆ ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ.

   ಸಚಿವರುಗಳು ಸೂಚಿಸುವಂತಹ ಅಭ್ಯರ್ಥಿ ಗೆಲುವಿಗೆ ಎಲ್ಲಾರೂ ಸೇರಿ ಒಗ್ಗಟ್ಟಿನಿಂದ ಶ್ರಮವಹಿಸುವುದಾಗಿ ಸಭೆಯಲ್ಲಿದ್ದವರು ಒಪ್ಪಿಗೆ ಸೂಚಿಸಿದ್ದಾರೆ.

ಸಭೆಯಲ್ಲಿ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಜಿ.ಜಯಚಂದ್ರ , ಮಾಜಿ ಸಚಿವರು ಹಾಲಿ ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್ , ತಿಪಟೂರು ಶಾಸಕ ಕೆ.ಷಡಕ್ಷರಿ , ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್, ಪಾವಗಡ ಶಾಸಕ ವಿ.ವೆಂಕಟೇಶ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ , ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾಜಿ ಸಚಿವ ವೆಂಕಟರವಣಪ್ಪ ಹಾಗೂ ಮಾಜಿ ಶಾಸಕರುಗಳಾದ ಡಿ.ಸಿ.ಗೌರಿಶಂಕರ್, ಹೆಚ್.ನಿಂಗಪ್ಪ , ಡಾ.ರಫೀಕ್ ಅಹಮದ್, ಬಿ.ಎಂ.ಎಲ್. ಕಾಂತರಾಜು ಹಾಗೂ ಶಶಿಕುಮಾರ್ ಹುಲಿಕುಂಠೆ ಮಠ್  ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap