ಬೆಂಗಳೂರು:
ರಾಜ್ಯ ಸರ್ಕಾರ ನಾಳೆ ರಾತ್ರಿಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಿದ್ದು ಈ ನಿಯಮ ಚಿತ್ರೋದ್ಯಮದ ಚಟುವಟಿಕೆಗಳ ಮೇಲೂ ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣವನ್ನು 14 ದಿನಗಳವರೆಗೆ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿತ್ರ ಮಂದಿರಗಳಿಂದ ಪ್ರೇಕ್ಷಕರು ದೂರ ಉಳಿದಿದ್ದು, ಈಗಾಗಲೇ ಥಿಯೇಟರ್ ಗಳ ಬಾಗಿಲು ಮುಚ್ಚಿವೆ. ಇದೀಗ ಕಠಿಣ ನಿಯಮ ಜಾರಿ ಹಿನ್ನೆಲೆಯಲ್ಲಿ ಶೂಟಿಂಗ್ ಗಳಿಗೂ ಸರ್ಕಾರ ನಿಷೇಧ ಹೇರಿರುವುದು ಸಿನಿಮೋದ್ಯಮಕ್ಕೆ ಸಂಕಷ್ಟ ಎದುರಾದಂತಾಗಿದೆ.
ಕೊರೊನಾ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ಮಾದರಿಯ 14 ದಿನಗಳ ಕಠಿಣ ನಿಯಮ ಜಾರಿ ಮಾಡಿದ್ದು, ಇದನ್ನು ಕೋವಿಡ್ ಕರ್ಫ್ಯೂ ಎಂದೇ ಕರೆಯಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
