ಹಾನಗಲ್ಲ :
ಹಾನಗಲ್ಲ ತಾಲೂಕಿನ ಶೇಷಗಿರಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ರಂಜಿತಾ ಶ್ರೀಧರ ಶೆಟ್ಟಿ ಸ್ಕೂಟಿಯಲ್ಲಿ ಶಾಲೆಗೆ ಹೋಗುತ್ತಿರುವಾಗ, ಅಪರಚಿತ ವ್ಯಕ್ತಿಯೊಬ್ಬರು ಶಿಕ್ಷಕಿಯ ಮೊಬೈಲ ಹಾಗೂ ಹಣವನ್ನು ಕಸಿದು ಪರಾರಿಯಾದ ಘಟನೆ ನಡೆದಿದ್ದು ಕೂಡಲೇ ಅಪರಾಧಿಯನ್ನು ಬಂದಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಒತ್ತಾಯಿಸಿದೆ.
ಮಂಗಳವಾರ ಹಾನಗಲ್ಲಿನ ತಹಶೀಲ್ದಾರ ಕಛೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದ ಅವರು, ಹಾನಗಲ್ಲ ತಾಲೂಕಿನಲ್ಲಿ ಬಹಳಷ್ಟು ಮಹಿಳಾ ಶಿಕ್ಷಕಿಯರು ದ್ವಿಚಕ್ರ ವಾಹನಗಳ ಮೂಲಕ ಹಾನಗಲ್ಲ ಹಾಗೂ ಇತರ ಪಟ್ಟಣಗಳಿಂದ ಗ್ರಾಮೀಣ ಪ್ರದೇಶಗಳ ಶಾಲೆಗೆ ತೆರಳುತ್ತಾರೆ. ಶೇಷಗಿರಿಯ ಶಿಕ್ಷಕಿ ಶಾಲೆಗೆ ಹೋಗುತ್ತಿರುವಾಗ ನಡೆದ ಘಟನೆ ಶಿಕ್ಷಕ ಸಮುದಾಯದಲ್ಲಿ ಆತಂಕ ತಂದೊಡ್ಡಿದೆ. ಇಂಥ ಘಟನೆಗಳು ಶಿಕ್ಷಕರು ಸುರಕ್ಷಿತವಾಗಿ ತೆರಳಲು ತೊಂದರೆಯಾಗಿದೆ. ಈ ಪ್ರಕರಣವನ್ನು ಸರಕಾರಿ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕೂಡಲೇ ಶೇಷಗಿರಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ರಂಜಿತಾ ಶ್ರೀಧರ ಶೆಟ್ಟಿ ಅವರ ಮೊಬೈಲ್ ಕಸಿದು, ಹಣ ದೋಚಿದ ವ್ಯಕ್ತಿಯನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಬೇಕು. ಹಾನಗಲ್ಲ ತಾಲೂಕಿನಲ್ಲಿ ಬಹಳಷ್ಟು ಶಿಕ್ಷಕಿಯರು ಹಳ್ಳಿಗಳಿಗೆ ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದು ಪೊಲೀಸ ಹಾಗೂ ಕಂದಾಯ ಇಲಾಖೆ ಇವರಿಗೆ ರಕ್ಷಣೆ ಒದಗಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಪೊಲೀಸ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಂ.ಪಾಟೀಲ, ಪದಾಧಿಕಾರಿಗಳಾದ ಬಿ.ಎಸ್.ಕರೆಣ್ಣನವರ, ವಿಜೇಂದ್ರ ಯತ್ತಿನಹಳ್ಳಿ, ಎನ್.ವಿ.ಅಗಸನಹಳ್ಳಿ, ಜಿ.ಆರ್.ನರೇಂದ್ರ, ಕೆ.ಎಚ್.ಶ್ರೀಧರ, ಸಿದ್ದಪ್ಪ ಜೋಗಿ,. ಕೆ.ಮಹಾಬಳೇಶ್ವರ, ಎಚ್.ಆಯ್.ಭಜಂತ್ರಿ, ವೆಂಕಟೇಶ ನಾಯಕ್, ಎಸ್.ಎಸ್.ಗೌರಣ್ಣನವರ, ಮಹೇಶ್ ನಾಯಕ್, ಎನ್.ಪಿ.ಕಲ್ಲೇದೇವರ, ಬಿ.ಶಿವಕುಮಾರ, ಆಯ್.ಪಿ.ಕುಂಕೂರ, ಸಂತೋಷ ವಡ್ಡರ, ಸುಭಾಸ ಕುರುಬರ, ಎಂ.ಎ.ಮನ್ನಂಗಿ, ಆರ್.ಬಿ.ಬಡಿಗೇರ. ಎಸ್.ಪಿ.ಹೇರೂರ ಮೊದಲಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ