ಹಾವೇರಿ :
ನವೆಂಬರ 14 ನ್ನು ಪ್ರತಿ ವóರ್ಷ ಮಕ್ಕಳ ದಿನಾಚರಣೆ ಆಚರಿಸುವಂತೆ ಮಕ್ಕಳ ದಿನಾಚರಣೆ ಪ್ರಯುಕ್ತ ಭಾರತ ದೇಶದಾದ್ಯಂತ ಚೈಲ್ಡ್ಲೈನ್ ಸೇ ದೋಸ್ತಿ ವೀಕ್ ಅಭಿಯಾನವನ್ನು ಹಮಿಕೊಂಡಿದ್ದು 2010 ರಿಂದ ಆಚರಿಸಲಾಗುತ್ತಿದೆ. ಮಕ್ಕಳ ರಕ್ಷಣೆಯಲ್ಲಿ ಚೈಲ್ಡಲೈನ್ಗೆ ಸಹಾಯ ಮತ್ತು ಪ್ರೋತ್ಸಾಹ ನೀಡಿದಂತಹ ಎಲ್ಲಾ ಸಂಬಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸುರಕ್ಷಾ ಬಂಧನ ಕಟ್ಟುವ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಎಸ್ ಎಚ್ ಮಜೀದ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳು ದೇಶ ಆಸ್ತಿ.
ಭಾರತ ದೇಶದ ಭವಿಷ್ಯ ಮಕ್ಕಳ ಬೌಧ್ದಿಕ ಶಕ್ತಿಯ ಅನಾವರಣವನ್ನು ಅವಲಂಬಿಸಿದ್ದು, ಮಕ್ಕಳ ಆಶೋತ್ತರ ಇಡೇರಿಕೆ ನಾವೇಲ್ಲ ಬದ್ದರಾಗಬೇಕಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಸಾರ್ವಜನಿಕ ಮುಂದೆಯೂ ಸಹ ಅವರ ಸಹಾಯ ಮತ್ತು ಪ್ರೋತ್ಸಾಹ ನಮ್ಮ ಜೊತೆ ಇರುವಂತೆ ಮಾಡುವುದಾಗಿದೆ ಎಂದರು.
ನವ್ಹೆಂಬರ್ 14 ಮಕ್ಕಳ ದಿನಾಚರಣೆ ಪ್ರಯುಕ್ತ ಭಾರತ ದೇಶದಾದ್ಯಂತ ಚೈಲ್ಡ್ಲೈನ್ ಸೇ ದೋಸ್ತಿ ವೀಕ್ ಅಭಿಯಾನವನ್ನು ಹಮ್ಮಿಕೊಂಡಿದ್ದು. ಚೈಲ್ಡಲೈನ್ 1098 ಮಕ್ಕಳ ರಕ್ಷಣೆಯಲ್ಲಿ ಹಲವಾರು ರೀತಿ ಕಾರ್ಯನಿರ್ವಹಿಸುತಿದ್ದು, ಮಕ್ಕಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿ ದಿ 15 ರಿಂದ 22 ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ ಈ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಪಾಲಕ ಪೋಷಕರು ಭಾಗವಹಿಸಿ ಈ ಅಭಿಯಾನದ ಉದ್ದೇಶ ಸಕಾರಗೊಳಿಸಲು ಎಲ್ಲರ ಸಹಕಾರ ಬಹು ಮುಖ್ಯ ವಾಗಿದ್ದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಎಸ್ ಎಚ್ ಮಜೀದ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಪಿವೈ ಶೆಟ್ಟೇಪ್ಪನವರ.ಮಕ್ಕಳ ಸಹಾಯವಾಣಿ ಕೇಂದ್ರದ ನಿರ್ದೇಶಕರಾದ ಶ್ರೀಮತಿ ಗೀತಾ ಪಾಟೀಲ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
