ಬಾಗಲಕೋಟೆ:
ಆಕಳಿಗೆ ಹಾಕಲು ದೂರದ ಊರಿನಿಂದ ಮೇವು ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್ ಲೋಡಿಗೆ ಬೆಂಕಿ ತಗುಲಿ ಅದರಲ್ಲಿದ್ದ ಪ್ರಯಾಣಿಕರು ಸಜೀವದಹನವಾಗುದನ್ನು ಅರಿತ ಚಾಲಕ ಟ್ರ್ಯಾಕ್ಟರನ್ನೇ ಕೆರೆಗೆ ಇಳಿಸಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಾಲಕ ಯಂಕಪ್ಪ ಜಾಣ್ಮೆಯಿಂದ ಟ್ರ್ಯಾಕ್ಟರನ್ನು ಕೆರೆಗೆ ಇಳಿಸುವ ಮೂಲಕ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಡೆದಿದ್ದಾರೆ. ಈ ಘಟನೆಯಿಂದಾಗಿ ಸುಮಾರು 30 ಸಾವಿರ ಮೌಲ್ಯದ ಮೇವು ಹಾಗೂ ಟ್ರ್ಯಾಕ್ಟರ್ ಎಂಜಿನಿಗೆ ಹಾನಿಯಾಗಿದೆ. ಬೆಂಕಿ ಅನಾಹುತವನ್ನು ತಪ್ಪಿಸಿದ ಚಾಲಕನಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಟ್ರ್ಯಾಕ್ಟರ್ ಗೆ ಬೆಂಕಿ ತಗುಲಿ, ಕೆರೆಗೆ ಇಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








