ಬೆಂಗಳೂರು
ಪಕ್ಕದ ಮನೆಯ ಯುವತಿಯ ಸ್ನೇಹ ಮಾಡಿಕೊಂಡು ಆಕೆ ಸ್ನಾನ ಮಾಡುವಾಗ ಫೋಟೋ ಕ್ಲಿಕ್ಕಿಸಿ ದೈಹಿಕ ಸಂಪರ್ಕಕ್ಕಾಗಿ ಪೀಡಿಸುತ್ತಿದ್ದ ನಗರದ ಐಶ್ವರ್ಯ ಕನ್ಸಲ್ಟೆನ್ಸ್ ಸಂಸ್ಥೆಯ ಮಾಲೀಕ ರುದ್ರಸ್ವಾಮಿಯನ್ನು ಚಿಕ್ಕಮಗಳೂರಿನ ಅಜ್ಜಂಪುರದ ಬಳಿ ರುಂಡ ಮುಂಡ ಬೇರ್ಪಡಿಸಿ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದ ಕೃತ್ಯವನ್ನು ಪೊಲೀಸರು ಬೇಧಿಸಿಗಿದ್ದಾರೆ.
ಕೊಲೆಗೈದ ಯುವತಿ ಆಶಾ ಆಕೆಯ ತಂದೆ-ತಮ್ಮ ಸೇರಿ ಮೂವರನ್ನು ಬಂಧಿಸಿದ್ದು ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ತಾಯಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಚಿಕ್ಕಮಗಳೂರು ಎಂದು ಚಿಕ್ಕಮಗಳೂರು ಎಸ್‍ಪಿ ಹರೀಶ್‍ಪಾಂಡೆ ತಿಳಿಸಿದ್ದಾರೆ.
ಕೆರೆಯಲ್ಲಿ ಪತ್ತೆ
ಅಜ್ಜಂಪುರದ ಸಮೀಪದ ಬುಕ್ಕರಾಯನ ಕೆರೆಯಲ್ಲಿ ಕಂಡುಬಂದ ಚೀಲದಿಂದ ರುಂಡವಿಲ್ಲದ ದೇಹ ಪತ್ತೆಯಾದ ಪ್ರಕರಣವನ್ನು ಜಾಡು ಹಿಡಿದ ಪೊಲೀಸರಿಗೆ ರುಂಡ – ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವನ ಹೆಸರು ರುದ್ರಸ್ವಾಮಿ(32) ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಮೂಲತಃ ದಾವಣಗೆರೆಯವನಾಗಿದ್ದ ರುದ್ರಸ್ವಾಮಿ ಬೆಂಗಳೂರಲ್ಲಿ ಐಶ್ವರ್ಯ ಕನ್ಸಲ್ಟೆನ್ಸ್ ನಡೆಸುತ್ತಾ ನಿರುದ್ಯೋಗಿಗಳಿಗೆ ಖಾಸಗಿ ಕೆಲಸ ಕೊಡಿಸುತ್ತಿದ್ದ. ಈ ರುದ್ರಸ್ವಾಮಿ ನೆರೆ ಮನೆಯ ಯುವತಿ ಜೊತೆ ಸ್ನೇಹ ಬೆಳೆಸಿ, ಆಕೆ ಸ್ನಾನ ಮಾಡುವಾಗ ಬೆತ್ತಲೆ ಫೋಟೋ ತೆಗೆದು ಹಣ ಹಾಗೂ ದೈಹಿಕ ಸುಖಕ್ಕೆ ಪದೇ ಪದೇ ಪೀಡಿಸುತ್ತಿದ್ದನು.
ಈ ವಿಚಾರದಿಂದ ನೊಂದು ಊರಿಗೆ ತೆರಳಿದ್ದ ಯುವತಿ. ಈ ಎಲ್ಲ ವಿಷಯವನ್ನ ತನ್ನ ಪೋಷಕರಿಗೆ ತಿಳಿಸಿದ್ದಳು. ಅಪ್ಪನ ಮಾತು ಕೇಳಿ ಯುವತಿ ರುದ್ರಸ್ವಾಮಿಯನ್ನು ಊರಿಗೆ ಕರೆದಿದ್ದಳು. ರುದ್ರಸ್ವಾಮಿ ಖುಷಿ ಖುಷಿಯಾಗಿ ದಾವಣಗೆರೆಯತ್ತ ಕಾರ್ ತೆಗೆದುಕೊಂಡು ಹೋಗಿದ್ದ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








