ಹೂವಿನಹಡಗಲಿ :
ಅಂದಿನ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್‍ರವರ ಆಡಳಿತದ ಅವಧಿಯಲ್ಲಿ ನೂತನ ಜಿಲ್ಲೆಗಳು ರಚನೆಗೊಂಡಾಗ ಹರಪನಹಳ್ಳಿ ಬಳ್ಳಾರಿ ಜಿಲ್ಲೆಯನ್ನು ಬಿಟ್ಟು ಹೋಗುತ್ತದೆ. ಹೈ.ಕ. ವಿಶೇಷ ಸೌಲತ್ತಿನಿಂದ ಅಲ್ಲಿನ ಜನತೆ ವಂಚಿತರಾಗುತ್ತಾರೆ ಎನ್ನುವ ಆತಂಕವನ್ನು ಮಾಜಿ ಉಪಮುಖ್ಯಮಂತ್ರಿಗಳಾದ ಎಂ.ಪಿ.ಪ್ರಕಾಶ್‍ರವರು ಪಟೇಲರ ಮುಂದೆ ವ್ಯಕ್ತಪಡಿಸಿದ್ದರು ಆದರೂ ಪಟೇಲರು ಪ್ರಕಾಶರಿಗೆ ಸಮಾಧಾನ ಪಡಿಸುವ ಮೂಲಕ ನೂತನ ದಾವಣಗೆರೆ ಜಿಲ್ಲೆಗೆ ಹರಪನಹಳ್ಳಿಯನ್ನು ಸೇರ್ಪಡೆಗೊಳಿಸಿದ್ದರು ಎಂದು ಮಾಜಿ ಸಚಿವರಾದ ಎಸ್.ಎಸ್.ಪಾಟೀಲರು ಸ್ಮರಿಸಿದರು.
ಅವರು ದಿವಂಗತ ಮಾಜಿ ಶಾಸಕ ಎಂ.ಪಿ.ರವೀಂದ್ರರವರ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಆದರೆ, ಎಂ.ಪಿ.ರವೀಂದ್ರರವರು ಶಾಸಕರಾದ ಮೇಲೆ ಹರಪನಹಳ್ಳಿ ತಾಲೂಕನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸಿ 371 (ಜೆ) ವಿಶೇಷ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ತಂದೆಯ ಆಸೆಯನ್ನು ಪೂರೈಸಿದ್ದಾರೆ ಎಂದರು.
ಎಂ.ಪಿ.ರವೀಂದ್ರರವರ ಗುಣಗಾಣಮಾಡಿದ ಎಸ್.ಎಸ್.ಪಾಟೀಲರು ಎಂ.ಪಿ.ರವೀಂದ್ರರವರಿಗೆ ತಂದೆ ಪ್ರಕಾಶರಿಗಿಂತ ಜನಪ್ರಿಯತೆ ಇತ್ತು. ಒಬ್ಬ ಎದೆಗಾರಿಕೆಯುಳ್ಳ ಯುವನಾಯಕರಾಗಿದ್ದರು ಎಂದು ಬಣ್ಣಿಸಿದರು. ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ವಿಧಿವಶರಾದ ಎಂ.ಪಿ.ರವೀಂದ್ರರವರಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಆ ಕುಟುಂಬಕ್ಕೆ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಭಗವಂತ ನೀಡಲಿ ಎಂದು ಆಶಿಸಿದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಟಿ.ಎಂ.ಚಂದ್ರಶೇಖರಯ್ಯ, ಮಾಜಿ ಶಾಸಕ ಚಂದ್ರಶೇಖರಯ್ಯ, ವೀವಿ ಸಂಘದ ಕಾರ್ಯದರ್ಶಿ ಕೋರನೂರು ಕೊಟ್ರಪ್ಪ, ಮಾತನಾಡಿ ದಿವಂಗತ ಎಂ.ಪಿ.ರವೀಂದ್ರರವರ ಒಡನಾಟದ ಕ್ಷಣಗಳನ್ನು ಹಂಚಿಕೊಂಡರು.
ಎಂ.ಪಿ.ರವೀಂದ್ರರವರ ಮಾತೋಶ್ರೀ ಎಂ.ಪಿ.ರುದ್ರಾಂಬ, ಹೊಸಪೇಟೆ ಕೊಟ್ಟೂರು ಮಠದ ಸಂಗನಬಸವ ಶ್ರೀಗಳು, ಸೇರಿದಂತೆ ಹಲವಾರು ಮಠಾಧೀಶರರು, ಗಣ್ಯವ್ಯಕ್ತಿಗಳು, ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಅರ್ಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
