ದಾವಣಗೆರೆ:
ನಗರದ ಅಕ್ಕಮಹಾದೇವಿ ರಸ್ತೆ(ಎವಿಕೆ ರಸ್ತೆ)ಯ ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ.ಇಲ್ಲಿನ ಅಕ್ಕಮಹಾದೇವಿ ರಸ್ತೆಯಲ್ಲಿರುವ ಎರಡು ಬಟ್ಟೆ ಅಂಗಡಿ, ಒಂದು ಮೊಬೈಲ್ ಶಾಪ್ ಹಾಗೂ ಒಂದು ಕ್ಯಾಮೆರಾ ಅಂಗಡಿಯಲ್ಲಿ ಸರಣಿ ಕಳ್ಳತನ ನಡೆಸಲು ಯತ್ನಿಸಿರುವ ಕಳ್ಳರು, ಈ ನಾಲ್ಕು ಅಂಗಡಿಗಳ ಬೀಗ ಮತ್ತು ಗ್ಲಾಸ್ ಒಡೆದು ಒಳಗೆ ನುಗ್ಗಿ, ಅಂಗಡಿಯಲ್ಲಿರುವ ವಸ್ತುಗಳನ್ನು ಕಳವು ಮಾಡಲು ಯತ್ನಿಸಿದ್ದಾರೆ. ಆದರೆ, ಅಂಗಡಿಯಲ್ಲಿರುವ ಮಾಲು ದೋಚಿಕೊಂಡು ಹೋಗಲಾಗದೇ, ಹೆದರಿ ಅಲ್ಲಿಂದ ಕಳ್ಳರು ಕಾಲು ಕಿತ್ತಿದ್ದಾರೆ.
ಮಾಲೀಕರು ತಮ್ಮ ಅಂಗಡಿಗಳಲ್ಲಿರುವ ವಸ್ತುಗಳನ್ನು ಪರಿಶೀಲಿಸಿ, ಕಳ್ಳತನ ಆಗದಿರುವ ಬಗ್ಗೆ ದೃಢ ಪಡಿಸಿದ್ದಾರೆ. ಬೀದಿ ಬದಿಯ ಬಟ್ಟೆ ವ್ಯಾಪಾರಿ ಮದನ್ ಎಂಬುವರಿಗೆ ಸೇರಿದ ಬಟ್ಟೆ ಮಳಿಗೆಗಳು ಹಾಗೂ ಪುಟ್ಟು ಎಂಬುವರಿಗೆ ಸೇರಿದ ಕ್ಯಾಮೆರಾ ಅಂಗಡಿ ಹಾಗೂ ಇನ್ನೊಂದು ಮೊಬೈಲ್ ಶಾಪ್ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ