ನಟ ನೀನಾಸಂ ಅಶ್ವತ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ

ಬೆಂಗಳೂರು

       ರಂಗಭೂಮಿ ಕಲಾವಿದ ನಟ ನೀನಾಸಂ ಅಶ್ವತ್ ವಿರುದ್ಧ ನಗರದ ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ.

       ಸ್ನೇಹಿತ ದ್ವಾರಕ ರಜತ್ ಅವರ ಬಳಿ 18 ಲಕ್ಷ ರೂ. ಸಾಲ ಪಡೆದು ವಾಪಸ್ ಕೊಡಲು ಸತಾಯಿಸುತ್ತಿರುವ ಜೊತೆ ನೀಡಿರುವ ಚೆಕ್ ಬೌನ್ಸ್ ಆಗಿರುವ ಹಿನ್ನೆಲೆಯಲ್ಲಿ ನೀನಾಸಂ ಅಶ್ವತ್ ವಿರುದ್ದ ಪ್ರಕರಣ ದಾಖಲಾಗಿದೆ.

          ಫಾರ್ಮ್ ಹೌಸ್ ಬಿಸಿನೆಸ್ ನಲ್ಲಿ ಪಾಲುದಾರನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ 18 ಲಕ್ಷ ರೂ. ಹಣವನ್ನು ಪಡೆದು ಫಾರ್ಮ್ ಹೌಸ್ ಪಾಲುದಾರನಾಗಿ ಮಾಡಿಕೊಳ್ಳದೇ ಹಣವೂ ವಾಪಾಸ್ ನೀಡದೇ ಸತಾಯಿಸುತ್ತಿದ್ದಾರೆ. ಹೀಗಾಗಿ ನೀನಾಸಂ ಅಶ್ವತ್ ಮೇಲೆ ನಾನು ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದೇನೆ ಎಂದು ರಜತ್ ತಿಳಿಸಿದ್ದಾರೆ.

ಪ್ರಕರಣದ ವಿವರ

          ವಿಜಯ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನೀನಾಸಂ ಅಶ್ವತ್ ಅವರ ಪರಿಚಯವಾಗಿತ್ತು. ಈ ಸಮಯದಲ್ಲಿ ಫಾರ್ಮ್ ಹೌಸ್ ಒಡೆತನದಲ್ಲಿ ಪಾಲುದಾರಿಕೆ ಆಮಿಷ ಒಡ್ಡಿದ್ದರು. ನಂತರ ಒಡೆತನದ ಪಾಲುದಾರಿಕೆಯೂ ಇಲ್ಲ ಹಣವೂ ಹಿಂದಿರುಗಿಸಿಲ್ಲ. ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದರು ನೀನಾಸಂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

          ನೀನಾಸಂ ಅಶ್ವತ್ 2007-2008ರಿಂದ ಹಣ ನೀಡದೇ ಸತಾಯಿಸುತ್ತಿದ್ದಾರೆ. ಅಲ್ಲದೇ ನನಗೆ ನೀಡಿದ ಚೆಕ್ ಕೂಡ ಬೌನ್ಸ್ ಆಗಿದೆ. ಚೆಕ್ ಬೌನ್ಸ್ ಕೇಸ್ ಬುಕ್ ಮಾಡಿದರೂ ನೀನಾಸಂ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ನ್ಯಾಯಾಲಯಕ್ಕೆ ಹೋಗದೇ ಅಶ್ವತ್ ಜಾಮೀನು ಪಡೆದಿದ್ದರು. ಕೊಟ್ಟ 18 ಲಕ್ಷ ರೂ. ಸಾಲದಲ್ಲಿ 3 ಲಕ್ಷ ರೂ. ಮಾತ್ರ ಹಿಂದಿರುಗಿಸಿ ಮೋಸ ಮಾಡಿದ್ದಾರೆ.

ದೂರು ದಾಖಲು

         ಈ ಸಂಬಂಧ ನಾನು ಕಲಾವಿದರ ಸಂಘ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ ಮಂಡಳಿಯವರು ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ರಜತ್ ಹೇಳಿದ್ದಾರೆ.

        ರಜತ್ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಎಲ್ಲಾ ಖ್ಯಾತ ಕಲಾವಿದರ ಜೊತೆ ಬಣ್ಣ ಹಚ್ಚಿದ್ದಾರೆ. ಮುಂಗಾರುಮಳೆ, ಗಾಳಿಪಟ, ವಿಷ್ಣುವರ್ಧನ, ಕೋಲಾರ ಸಿನಿಮಾಗಳಲ್ಲಿ ನಟಿಸಿ ಈಗ ಬಿಡುಗಡೆಗೆ ಸಜ್ಜಾಗಿರುವ ಕೆಜಿಎಫ್ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link