ಚೈಲ್ಡ್ ಲೈನ್ ಸೇ ದೋಸ್ತಿ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ

ಬಳ್ಳಾರಿ

        ಭಾರತ ಸರ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ1995 ರಲ್ಲಿ ಚೈಲ್ಡ್ ಲೈನ್ ಯೋಜನೆಯು ಇಂಡಿಯಾ ಫೌಂಡೇಷನ್ ಇವರ ಸಹಯೋಗದೊಂದಿಗೆ ಮುಂಭೈನಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು, ದಿನಾಂಕ ನವೆಂಬರ್,16 ರಿಂದ20 ರವರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಮಕ್ಕಳ ಕಲ್ಯಾಣ ಸಮಿತಿ, ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಮಿಕ ಇಲಾಖೆ ಮತ್ತು ಪೊಲಿಸ್ ಇಲಾಖೆ ಶಿಕ್ಷಣ ಇಲಾಖೆ ಸಂಯೋಜನೆ ಯೊಂದಿಗೆ ಮಾನ್ಯ ಶ್ರೀ ಎಸ್.ಬಿ.ಹಂದ್ರಾಳ್ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರು ಉದ್ಘಾಟಕರಾಗಿ ಆಗಮಿಸುತ್ತಾರೆ, ನಂತರ ವಂ.ಫಾದರ್ ಜೋಸ್ ಪ್ರಕಾಶ್ ವ್ಯವಸ್ಥಾಪಕರು ಅಧ್ಯಕ್ಷತೆ ವಹಿಸುವರು ಸೆಂಟ್ ಜಾನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜ್ ನಲ್ಲಿ ಇಂದು ಸರಿಯಾಗಿ10 ಘಂಟೆಗೆ ಕಾರ್ಯಕ್ರಮ ನೇರವೇರಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಂಯೋಜಕರು ಪುಸ್ಪರಾಜ್ ತಿಳಿಸಿದರು

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯ ಮುಖಾಂತರ ಚೈಲ್ಡ್ ಲೈನ್ ನೆಟ್ವರ್ಕ್ ಭಾರತದ 453 ಪಟ್ಟಣಗಳಲ್ಲಿ 72 ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಕರ್ನಾಟಕದ 28 ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜುಲೈ 2011 ರಿಂದ ಬಳ್ಳಾರಿ ಜಿಲ್ಲೆಯಲ್ಲಿ ನಾಲ್ಕು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ, ನಮ್ಮ ಮೂಲ ಉದ್ದೇಶ ಸಂಕಷ್ಟದಲ್ಲಿರುವ ಎಲ್ಲಾ ಮಕ್ಕಳನ್ನು ತಲುಪಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು

ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಸ್ನೇಹಿ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಸಹಾಕರದೊಂದಿಗೆ ಮಕ್ಕಳ ಮೇಲೆ ದೌರ್ಜನ್ಯ ತಡೆಗಟ್ಟಲು ಸ್ನೇಹಿ ಪರಿಸರ ನಿರ್ಮಾಣ ಮಾಡುವುದು ಮೂಲ ಉದ್ದೇಶ ಹೊಂದಿದೆ, ಬಾಲಕಾರ್ಮಿಕ ರಕ್ಷಣಾ ಕುರಿತು ಜಾಗೃತಿ ಕಾರ್ಯಕ್ರಮ, ಬಾಲ್ಯವಿವಾಹ ಜಾಗೃತಿ ಸುರಕ್ಷ ಬಂಧನ, ಹಾಗೂ ಅಂತರ್ಜಾಲ ದುರ್ಬಳಕೆ ಮತ್ತು ಮಾದಕ ವಸ್ತುಗಳ ಸೇವನೆಯ ಮೌನ ಜಾತ 19 ನವೆಂಬರ್ ಮಕ್ಕಳ ಮೇಲೆ ದೌರ್ಜನ್ಯ ತಡೆ ವಿಶ್ವ ದಿನಾಚರಣೆ ತೊರಣಗಲ್ನಲ್ಲಿ ನಡೆಯಲಿದೆ ಹೀಗೆ ಹತ್ತು ಹಲವು ಕಾರ್ಯಕ್ರಮ ಗಳನ್ನು ಒಳಗೊಂಡಿದೆ ಈ ಸಂದರ್ಭದಲ್ಲಿ ಮಂಜುನಾಥ ಮಹಿಳಾ ತಂಡದ ಸದಸ್ಯರು ಬಿಡಿಗೌಡ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link