ಖಾಸಗಿ ಆಸ್ಪತ್ರೆಗಳ ಸುಲಿಗೆ : ಸಭೆಯಲ್ಲಿ ಚರ್ಚೆ

ಹೂವಿನಹಡಗಲಿ :

          ಹೂವಿನಹಡಗಲಿ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ರೋಗಿಗಳಿಂದ ವಿಪರೀತ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ತಾ.ಪಂ.ಮಲ್ಲಿಗೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾ.ಪಂ.ಸದಸ್ಯ ಜೆ.ಶಿವರಾಜ ಆರೋಪಿಸಿದರು.

          ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ತೆರೆದು ಹಣ ಸುಲಿಗೆ ಮಾಡುತ್ತಿರುವುದು ಅಲ್ಲದೇ, ಸರ್ಕಾರದಿಂದ ಸರಬರಾಜು ಆಗುವ ಔಷಧಿಗಳನ್ನು ಸಾರ್ವಜನಿಕರಿಗೆ ನೀಡದೇ ಪ್ರತಿಯೊಂದಕ್ಕೂ ಹೊರಗಡೆ ಚೀಟಿ ಬರೆದುಕೊಡುತ್ತಾರೆಂದು ಹೇಳಿದರು.

           ಈ ಕುರಿತು ತಾ.ಪಂ. ಇ.ಓ.ರವರು ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರರವರನ್ನು ಪ್ರಶ್ನಿಸಿದಾಗ ಈಗಾಗಲೇ ಪಟ್ಟಣದಲ್ಲಿ ಹಲವು ಖಾಸಗಿ ಆಸ್ಪತ್ರೆಗಳನ್ನು ಪರಿಶೀಲಿಸಿದಾಗ ಅಂತಹ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದರು. ಕೇವಲ ಆಯುರ್ವೇದಿಕ್ ಆಸ್ಪತ್ರೆಗಳನ್ನು ಪರಿಶೀಲಿಸಿದ ಬಗ್ಗೆ ಆರೋಗ್ಯಾದಿಕಾರಿಗಳು ಮಾಹಿತಿ ನೀಡಿದಾಗ ಜೆ.ಶಿವರಾಜರವರು ಎಂ.ಬಿ.ಬಿ.ಎಸ್. ಡಾ. ಆಸ್ಪತ್ರೆ ತೆರೆದು ವಸೂಲಿ ಮಾಡುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಹೇಳಿದರು.

           ಗ್ರಾಮ ವಿಕಾಸ ಯೋಜನೆಯಡಿ ಹಗರನೂರು ಗ್ರಾ.ಪಂ.ವ್ಯಾಪ್ತಿಯ ಹಿರೇಕೊಳಚಿ ಗ್ರಾಮಕ್ಕೆ ಬಿಡುಗಡೆಯಾಗಿರುವ ಅನುದಾನವನ್ನು ಸಂಬಂಧಪಟ್ಟಕಾಮಗಾರಿ ವರ್ಗಾಯಿಸುವಲ್ಲಿ ತಾಲೂಕು ಹಗರನೂರು ಗ್ರಾ.ಪಂ.ಅಧ್ಯಕ್ಷರು ಚೆಕ್ಕಿಗೆ ಸಹಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದ ಕಾರಣಕ್ಕೆ ಜಿಲ್ಲಾ ಪಂಚಾಯಿತಿ ಸಿಇಓರವರ ಸೂಚನೆಯ ಮೇರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸದಸ್ಯತ್ವವನ್ನು ಕೆ.ಪಿ.ಆರ್. 93ರ ಸೆಕ್ಷನ್ 49ರ ಅನ್ವಯ ರದ್ದುಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಾ.ಪಂ. ಇ.ಓ. ಸೋಮಶೇಖರ ತಿಳಿಸಿದರು.

           ತಾಲೂಕಿನ ಅಡವಿಮಲ್ಲನಕೇರಿ, ಮಹಾಜನದಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಕೂಡಲೇ ಪರಿಹರಿಸುವಂತೆ ತಾ.ಪಂ.ಸದಸ್ಯ ವೀರಣ್ಣ ಸಭೆಯ ಗಮನ ಸೆಳೆದರು. ಇಟ್ಟಿಗಿ ಗ್ರಾಮದಲ್ಲಿ ದೊಡ್ಡ ಗ್ರಾಮವಾಗಿರುವುದರಿಂದ ಈಗಿರುವ ಕುಡಿಯುವ ನೀರಿ ಸಾಕಾಗದೇ ಇನ್ನೂ ಎರಡು ಬೋರ್‍ವೆಲ್‍ಗಳನ್ನು ಕೊರೆಸ ನೀರು ಒದಗಿಸುವಂತೆ ಸದಸ್ಯ ಬಿ.ಲೋಕಪ್ಪ ಆಗ್ರಹಿಸಿದರು.

           ಅಲ್ಲದೇ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈಗಾಗಲೇ 4 ಸಾವಿರ ಕೂಲಿಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಯಾವುದೇ ಗ್ರಾಮಗಳಲ್ಲಿ ಗುಳೇ ಹೋಗದಂತೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು ಕಾರ್ಮಿಕರಿಗೆ ಕೆಲಸ ನೀಡಲು ತಿಳಿಸಿದರು.ಮತ್ತು ಒಂದು ಗ್ರಾಮಕ್ಕೆ 1 ರಂತೆ ದನದ ಕುಡಿಯುವ ನೀರಿನ ತೊಟ್ಟಿ, ಕುರಿ ಕುಡಿಯುವ ನೀರಿನ ತೊಟ್ಟಿಯನ್ನು ನಿರ್ಮಿಸುವಂತೆ ಗ್ರಾ.ಪಂ. ಪಿಡಿಓರವರಿಗೆ ಸೂಚಿಸಿದರು.

          ಗುಳೇ ಹೋಗುವ ಸಾರ್ವಜನಿಕರ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಬಾರದು ಎನ್ನುವ ದೃಷ್ಠಿಯಿಂದ ಪ್ರತಿ ವರ್ಷವು ಕೂಡಾ ಕರೆಯಲಾಗುವ ಋತುಮಾನ ಶಾಲಾ ಕೇಂದ್ರಗಳನ್ನು ಈ ವರ್ಷವು ತೆರೆಯಲಾಗಿದೆ ಎಂದು ಬಿಇಓ ಬಸವರಾಜ ಶಿವಪುರರವರು ಸಭೆಗೆ ತಿಳಿಸಿದರು.

           ಒಟ್ಟು 30 ಕೇಂದ್ರಗಳನ್ನು ತೆರೆಯಲಾಗಿದ್ದು, 740 ವಿದ್ಯಾರ್ಥಿಗಳು ಈ ಕೇಂದ್ರಗಳಲ್ಲಿ ನಿರಂತರ ವಸತಿಯುತ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು ಮಾಹಿತಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link