ಕಾಂಗ್ರೆಸ್ ಮಹಿಳೆಯರಿಗೆ ಹೊಸ ಡ್ರೆಸ್ ಕೋಡ್..!

ಬೆಂಗಳೂರು:

      ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ನೂತನ ಡ್ರೆಸ್ ಕೋಡ್ ಮಾಡಲು ನೂತನ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರು ಹೊರಡಿಸಿರುವ ಆದೇಶ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

      ಪಕ್ಷದ ಮಹಿಳಾ ಮುಖಂಡರು ಕಾರ್ಯಕರ್ತರು ಇನ್ನು ಮುಂದೆ ಮೈ, ಕೈ ಕಾಣುವಂತೆ ಬಟ್ಟೆ ತೊಡುವ ಹಾಗಿಲ್ಲ. ಸ್ಲೀವ್ ಲೆಸ್, ಪೆನ್ಸಿಲ್ ಟೈಟ್, ಸ್ಕಿನ್ ಟೈಟ್, ಶಾರ್ಟ್ ಸ್ಕರ್ಟ್ ಹಾಕುವ ಹಾಗಿಲ್ಲ. ಮೈತುಂಬ ಲಕ್ಷಣವಾಗಿ ಸೀರೆ ಉಟ್ಟು, ಕುತ್ತಿಗೆವರೆಗೆ ಮೈ ಮುಚ್ಚುವ ಬ್ಲೌಸ್ ಹಾಕಬೇಕು ಎಂದು ಮಹಿಳಾ ಕಾಂಗ್ರೆಸ್ ನ ನೂತನ ಅಧ್ಯಕ್ಷೆ ಪುಷ್ಪ ಅಮರನಾಥ್ ಆದೇಶ ಹೊರಡಿಸಿದ್ದಾರೆ.

      ಕಾಂಗ್ರೆಸ್‍ನ ಮಹಿಳಾ ಕಾರ್ಯಕರ್ತರು ಇನ್ನು ಮುಂದೆ ಪಕ್ಷದ ಸಭೆ ಸಮಾರಂಭಗಳಿಗೆ ತುಟಿಗೆ ಲಿಪ್‍ಸ್ಟಿಕ್, ಮುಖಕ್ಕೆ ಮೇಕಪ್ ಹಚ್ಚಿಕೊಂಡು ಬರುವಂತಿಲ್ಲ. ಅಷ್ಟೇ ಅಲ್ಲದೇ ಸೀರೆಯನ್ನು ಮೈ ತುಂಬಾ ಮುಚ್ಚಬೇಕು,ಬ್ಲೌಸ್ ಕುತ್ತಿಗೆ ಮುಚ್ಚಬೇಕು. ಸ್ಕರ್ಟ್, ಸ್ಲೀವ್ ಲೆಸ್ ಇಂತಹ ಉಡುಪನ್ನು ತೊಡುವಂತಿಲ್ಲ. ಇದು 133 ವರ್ಷದ ಹಳೆ ಪಕ್ಷದಲ್ಲಿ ಹೊಸ ನಿಯಮವಾಗಿದೆ.

Related image

      ನೂತನ ಅಧ್ಯಕ್ಷೆಯಾಗಿ ಪುಷ್ಪ ಅಮರನಾಥ್ ಅವರು ಭಾನುವಾರ ಅಧಿಕೃತವಾಗಿ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಹಿಳಾ ಪದಾಧಿಕಾರಿಗಳು ನೀಲಿ ಸೀರೆ ಉಟ್ಟು ಮೈ ಮುಚ್ಚುವಂತಹ ಬ್ಲೌಸ್ ತೊಟ್ಟು ಇದಕ್ಕೆ ಚಾಲನೆ ನೀಡೋಣ ಎಂದು ಪುಷ್ಪ ಹೇಳಿದ್ದಾರೆ.

      ನೂತನ ಡ್ರೆಸ್‍ಕೋಡ್ ಮಾಡಿದ ತಕ್ಷಣ, ನಾವು ಹಾಕಬೇಕಾದ ಬಟ್ಟೆಯನ್ನು ಅಧ್ಯಕ್ಷೆ ತೀರ್ಮಾನ ಮಾಡಬೇಕಾ. ನಮ್ಮ ಇಷ್ಟ, ನಮ್ಮ ಬಟ್ಟೆ. ಅವರು ಹೇಳಿದಂಗೆ ನಾವು ಯಾಕೆ ಕೇಳಬೇಕು. ಒಂದು ಸಭೆಯಾದರೆ ಅವರು ಹೇಳಿದ ಬಟ್ಟೆಯನ್ನು ಹಾಕಿಕೊಂಡು ಬರಬಹುದು. ಆದರೆ ಇನ್ನು ಮುಂದೆಯೂ ಇದೇ ರೀತಿ ಡ್ರೆಸ್ ಹಾಕಿಕೊಂಡು ಬರಬೇಕು ಎಂದರೆ ಕಷ್ಟವಾಗುತ್ತದೆ ಎಂದು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಅಧ್ಯಕ್ಷೆಯಾಗುವ ಮೊದಲೇ ಈ ರೀತಿ ಹೊಸ ನಿಯಮವನ್ನು ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link