ಪ್ರೇಯಸಿಯ ಹುಡುಕಿ ಮಧುವೆ ಮಂಟಪಕ್ಕೆ ಬಂದ ಪ್ರಿಯಕರ..!

ನೆಲಮಂಗಲ:

      ಪ್ರಿಯಕರನೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಯ ವಿವಾಹ ಮತ್ತೊಬ್ಬನೊಂದಿಗೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ಸಿನಿಮಾ ಶೈಲಿಯಲ್ಲಿ ಎಂಟ್ರಿ ಕೊಟ್ಟು ರಾದ್ದಾಂತ ಸೃಷ್ಠಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

       ಬೆಂಗಳೂರು ತಾಲ್ಲೂಕಿನ ನಂದರಾಮಯ್ಯನಪಾಳ್ಯದ ವರ ಶ್ರೀರಂಗನಾಥ, ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯದ ವಧು ಪದ್ಮಪ್ರಿಯಗೂ ಮದುವೆ ನಡೆಯುತ್ತಿತ್ತು. ಬೆಳಗ್ಗೆ ವರ ತಾಳಿ ಕಟ್ಟುವ ವೇಳೆ ದಿಢೀರನೆ ಈತ ಎಂಟ್ರಿ ಕೊಟ್ಟಿದ್ದು, ಪ್ರಿಯಕರನನ್ನು ನೋಡುತ್ತಲೇ ವಧು, ತಾನು ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾಳೆ.

ಮುರಿದು ಬಿತ್ತು ಮಧುವೆ:

     ಗಲಾಟೆಯಿಂದಾಗಿ ವರನ ಕಡೆಯವರು, ಮದುವೆ ಮುರಿಯಿತೆಂದು ಜಾಗ ಖಾಲಿ ಮಾಡಿದ್ದಾರೆ. ಇದರಿಂದಾಗಿ ಕೆಲಕಾಲ ಗೊಂದಲ ಸೃಷ್ಟಿಯಾಗಿದ್ದು ಬಳಿಕ ಮದುವೆ ಮುರಿದು ಬಿದ್ದಿದೆ. 

ಒಂದು ವರ್ಷದ ಪ್ರೀತಿ :

      ಪದ್ಮಪ್ರಿಯ ಹಾಗೂ ಸಂಜು  ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಪದ್ಮಪ್ರಿಯ ಮನೆಯವರು ಬಲವಂತವಾಗಿ ಬೇರೊಬ್ಬ ಯುವಕನೊಂದಿಗೆ ಮದುವೆ ಏರ್ಪಾಡು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಜು ಬಂದು ಗಲಾಟೆ ಮಾಡಿದ್ದಾನೆ. ಪ್ರಿಯಕರ ಸಂಜು ಹಾಸನ ಮೂಲದವನೆಂದು ತಿಳಿದುಬಂದಿದೆ.  ಇನ್ನು ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಆಗಮಿಸಿ ಸಂಜುನನ್ನು ವಶಕ್ಕೆ ಪಡೆದಿದ್ದಾರೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link