ಕೊಡಗು :
ಜಿಲ್ಲೆಯಲ್ಲಿ 35 ವರ್ಷದ ವ್ಯಕ್ತಿಗೆ ಕರೋನ ಸೋಂಕು ತಗುಲಿರುವುದು ದೃಢ ಪಟ್ಟ ಹಿನ್ನಲೆಯಲ್ಲಿ, ಜಿಲ್ಲೆಯಾದ್ಯಂತ ಹೆಲ್ತ್ ಎಮರ್ಜೆನ್ಸಿ ಘೋಷಿಸಿ, ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಆದೇಶ ಹೊರಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನ ಮೆಡಿಕಲ್ ಕಾಲೇಜಿನ ವರದಿ ಪ್ರಕಾರ ವಿದೇಶಕ್ಕೆ ತೆರಳಿ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಇದು ಜಿಲ್ಲೆಯ ಮೊದಲ ಕೊರೊನಾ ವೈರಸ್ ಪ್ರಕರಣವೆಂದು ದೃಢಪಟ್ಟಿದೆ ಎಂಬುದಾಗಿ ತಿಳಿಸಿದರು. ಹೀಗಾಗಿ ಕೊಡಗಿನಲ್ಲಿ ಕೊರೊನಾ ವೈರಸ್ ಪತ್ತೆಯಾದ ವ್ಯಕ್ತಿಯ ಗ್ರಾಮದ 500 ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದ್ದು, ಗ್ರಾಮದ 306 ಜನರ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ವಿವರಿಸಿದರು.
ಇನ್ನೂ ಕರೋನ ಎದುರಿಸಲು ಮತ್ತು ತಡೆಗೆ, ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. 100 ಬೆಡ್ ಐಸೊಲೇಟೆಡ್ ವಾರ್ಡ್, ಕೋರೆಂಟಲ್ 150 ಬೆಡ್ ಮತ್ತೊಂದು ವಾರ್ಡ್ ರೆಡಿ ಮಾಡಲಾಗಿದೆ. ಕೊಡಗು ಮೆಡಿಕಲ್ ಕಾಲೇಜಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪಾಸಿಟಿವ್ ಬಂದ ವ್ಯಕ್ತಿಯ ಆರೋಗ್ಯ ಸದ್ಯಕ್ಕೆ ಸ್ಟೇಬಲ್ ಇದೆ. ಮುಂಗಾಗ್ರತಾ ದೃಷ್ಠಿಯಿಂದ ಜಿಲ್ಲೆಯಲ್ಲಿ 144/3 ಸೆಕ್ಷನ್ ಕೂಡ ಜಾರಿ ಮಾಡಿದ್ದೇವೆ ಎಂದು ಹೇಳಿದರು.
ರೆಸಾರ್ಟ್, ಹೊಟೆಲ್, ಹೋಮ್ಸ್ ಸ್ಟೇ ಬುಕಿಂಗ್ ಕ್ಯಾನ್ಸಲ್ ಮಾಡಿ, ಹೊಸ ಬುಕಿಂಗ್ ತಗೊಬೇಡಿ. ಕರೋನ ಕಡೆಗೆ ಜಿಲ್ಲಾ ಮಟ್ಟದ ವಿಶೇಷ ತಂಡ ರಚನೆ ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮ ರುಟೀನ್ ಬಿಟ್ಟು ಬೇರೆ ಯಾವುದು ಮಾಡುವ ಹಾಗಿಲ್ಲ. ಇದೇ 31 ರವರೆಗೆ ಸಂತೆಗಳು, ಮಾರ್ಕೆಟ್ ಹಾಗೂ ಜಾತ್ರೆಗಳನ್ನು ನಡೆಸುವಂತಿಲ್ಲ.
ಇಂದು ಅಥವಾ ನಾಳೆ ಜಿಲ್ಲೆಯ ಎಲ್ಲಾ ಧಾರ್ಮಿಕ ಮುಖಂಡರ ಸಭೆ ಕರೆಯಲಾಗಿದೆ. ಶಾಲೆ ಕಾಲೇಜು ಅಂಗನವಾಡಿ, ಜಿಮ್, ಸ್ವಿಮ್ಮಿಂಗ್ ಪೂಲ್, ಮೈದಾನ, ಟ್ಯೂಷನ್ ಸೆಂಟರ್ ಬಂದ್ ಮಾಡಲು ಸೂಚಿಸಲಾಗಿದೆ ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ