ಉಡುಪಿ ಪೇಜಾವರ ಮಠದ ಶ್ರೀಗಳ ಕಾರಿಗೆ ಡಿಕ್ಕಿ

ಬೆಂಗಳೂರು,: 

   ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳಿಗೆ ಭದ್ರತೆ ನೀಡುತ್ತಿದ್ದ ಬೆಂಗಾವಲು ವಾಹನಕ್ಕೆ ಇಂಡಿಗೋ ಕಾರು ಡಿಕ್ಕಿ ಹೊಡೆದು ವೃದ್ಧ ದಂಪತಿ ಸಾವನ್ನಪ್ಪಿ ಎಸ್‍ಎಸ್‍ಐ ಸೇರಿ ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ಹೊಸಕೋಟೆಯ ಕರಪನಹಳ್ಳಿ ಗೇಟ್ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.

   ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ರಾಮಕೃಷ್ಣಯ್ಯ(75) ಸರ್ವಲೋಚನಾ(70)ಎಂದು ಮೃತ ದಂಪತಿಯನ್ನು ಗುರುತಿಸಲಾಗಿದೆ.ನಾಮಕರಣ ಕಾರ್ಯಕ್ರಮಕ್ಕೆ ಜ್ಯುವೆಲ್ಲರಿ ಶಾಪ್ ಮಾಲೀಕರಾದ ರಾಮಕೃಷ್ಣಯ್ಯ ಕುಟುಂಬ ಸಮೇತ ಚಿಂತಾಮಣಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ರಾಮಕೃಷ್ಣಯ್ಯ ಸೊಸೆ ನಳಿನಿ(55) ಗಂಭೀರವಾಗಿ ಗಾಯಗೊಂಡಿದ್ದು, ಕಾರು ಚಾಲಕ ನಾಗೇಶ್ ಕಾಲುಗಳಿಗೆ ಗಂಭೀರವಾದ ಗಾಯಗಳಾಗಿವೆ. ಮತ್ತೊಂದೆಡೆ ಡಿಕ್ಕಿಯಾದ ಹೈವೇ ಪ್ಯಾಟ್ರೋಲಿಂಗ್ ಪೊಲೀಸ್ ವಾಹನದ ಚಾಲಕ ಸೇರಿದಂತೆ ಎಎಸ್ ಶಂಭಯ್ಯ ಕೂಡ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

  ಪೇಜಾವರ ಶ್ರೀಗಳು ಚಿಂತಾಮಣಿ ತಾಲೂಕಿನ ಕೋನಕುಂಟ್ಲು ಗ್ರಾಮದಲ್ಲಿ ನಡೆಯುತ್ತಿರುವ ಕಾನ್ವ ಸಮ್ಮೇಳನದಲ್ಲಿ ಭಾಗವಹಿಸಿಲು ಬೆಂಗಳೂರಿನಿಂದ ಚಿಂತಾಮಣಿ ಕಡೆಗೆ ಆಗಮಿಸುತ್ತಿದ್ದರು. ದಂಪತಿಯಿಂದ ಕಾರು ಬಲ ಭಾಗದಲ್ಲಿ ಬಂದಿದ್ದ ಕಾರಣ ಈ ಅಪಘಾತ ಸಂಭವಿಸಿದೆ.

ಶ್ರೀಗಳು ಕಂಬನಿ
    ಘಟನೆ ಬಳಿಕ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಪ್ರಾಣಾಪಾಯದಲ್ಲಿದ್ದಾರೆ. ನಮ್ಮ ಕಾರಿಗೆ ಏನೂ ಆಗಿಲ್ಲ. ಪೊಲೀಸ್ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಆ ಕಾರಿನಲ್ಲಿದ್ದ ಇಬ್ಬರು ಮೃತರಾಗಿದ್ದಾರೆ. ಘಟನೆ ನಡೆದ ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸುವ ಏರ್ಪಾಡು ಮಾಡಿದ್ದೇವೆ. ಒಟ್ಟಿನಲ್ಲಿ ಇದೊಂದು ದುರಂತ ಎಂದು ಕಂಬನಿ ಮಿಡಿದರು.ಈ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತಕ್ಕೆ ಇಬ್ಬರು ಬಲಿ

    ವೇಗವಾಗಿ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ)ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಗರದ ಹೊರವಲಯದ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಗೆರೆ ಬಳಿ ನಡೆದಿದೆ.
ಸರ್ಜಾಪುರದ ಮುಲ್ಲೂರಿನ ಸುರೇಶ್‍ಬಾಬು(26)ಹಾಗೂ ಮಂಗಳೂರಿನ ಜಾಲೆಟ್ ಫರ್ನಾಂಢಿಸ್(27)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ,ಬೆಂಗಳೂರಿನಿಂದ ಕನಕಪುರ ಕಡೆಗೆ ಸ್ಕೂಟಿಯಲ್ಲಿ ಶನಿವಾರ ಮಧ್ಯಾಹ್ನ ಇವರಿಬ್ಬರು ಹೋಗುತ್ತಿದ್ದರು.

   ಮಾರ್ಗ ಮಧ್ಯೆ ಬೆಂಗಳೂರು-ಕನಕಪುರ ಮಾರ್ಗದ ಸೋಮನಹಳ್ಳಿಯ ನೆಟ್ಟಗೆರೆ ಬಳಿ ಮುಂದೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ನ್ನು ಹಿಂದಿಕ್ಕಲು ಮುನ್ನುಗ್ಗಿದಾಗ ಬಸ್ ಡಿಕ್ಕಿ ಹೊಡೆದು ಇಬ್ಬರು ಸಹ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ತಕ್ಷಣ ಕಗ್ಗಲೀಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link