ಕೇಂದ್ರದಿಂದ ಬಂದಿರುವುದು ಬರ ಅಧ್ಯಯನ ತಂಡವಲ್ಲ …???

ಹರಪನಹಳ್ಳಿ, 

   ತಾಲೂಕಿಗೆ ಕೇಂದ್ರ ಬರ ಅಧ್ಯಯನ ತಂಡ ಬಂದು ಹೋದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ರೈತ ಸಂಘ(ಹುಚ್ಚವನಹಳ್ಳಿ ಮಂಜುನಾಥ ಬಣ) ದ ಅಧ್ಯಕ್ಷ ಅರಸನಾಳು ಸಿದ್ದಪ್ಪ ಅವರು ತಾಲೂಕಿಗೆ ಬರ ಅಧ್ಯಯನ ತಂಡ ಆಗಮಿಸುವ ಮಾಹಿತಿಯನ್ನು ಅಧಿಕಾರಿಗಳು ರೈತ ಸಂಘದ ಅಧ್ಯಕ್ಷರು, ರೈತ ಮುಖಂಡರಿಗೆ ತಿಳಿಸಿರಲಿಲ್ಲ ಎಂದು ಅವರು ದೂರಿದರು.
ನಮಗೂ ಬರುವ ಮಾಹಿತಿ ತಿಳಿಸಿದ್ದರೆ, ನಾವು ಅವರಲ್ಲಿಗೆ ತೆರಳಿ ಅಹವಾಲು, ನಮ್ಮ ಕಷ್ಟ ಸುಖ, ಇಲ್ಲಿಯ ಬರದ ಸ್ಥಿತಿ ಗತಿ ಹೇಳುತ್ತಿವುದು ಆದರೆ ಅದಕ್ಕೆ ಅಧಿಕಾರಿಗಳು ಅವಕಾಶ ಮಾಡಿ ಕೊಡಲಿಲ್ಲ ಎಂದು ಅವರು ಅಸಮಾದಾನ ವ್ಯಕ್ತಪಡಿಸಿದರು.

  ಬಾಡೂಟ ಸ,ವಿದ ತಂಡ –
ನಿಗದಿತ ವೇಳಾ ಪಟ್ಟಿಯಂತೆ ಸಮೀಕ್ಷೆ ಮಾಡದ ತಂಡದವರು ಒಂದೆರಡು ಜಮೀನು ವೀಕ್ಷಿಸಿ ನಜೀರ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಾಡೂಟ ಸವಿದು ತರಾತುರಿಯಿಂದ ಹೋಗಿದ್ದಾರೆ. ಇಂತಹ ಸಮೀಕ್ಷೆಯಿಂದ ರೈತರಿಗೆ ಅನುಕೂಲ ವಾಗವ ನಿರೀಕ್ಷೆ ಇಲ್ಲವಾಗಿದೆ ಎಂದು ಅವರು ಹೇಳಿದ್ದಾರೆ.

  ಅವರು ಈಗ ನೋಡಿದುದಕ್ಕಿಂತ ತೀರ್ವ ಬರ ಇರುವ ಹಳ್ಳಿಗಳಿವೆ, ಆದರೆ ಆ ಕಡೆ ತಿರುಗಿ ಸಹ ನೋಡಿಲ್ಲ, ಆದ್ದರಿಂದ ಇದು ಬರ ಅಧ್ಯಯನ ತಂಡವಲ್ಲ ಮೋಜು ಮಸ್ತಿ ಬಾಡೂಟ ತಂಡ ಎಂದು ಅವರು ವ್ಯಾಖ್ಯಾನಿಸಿದರು.
ಬೆಳೆ ನಷ್ಟದ ಪರಿಹಾರ ಈವರೆಗೂ ಬಂದಿಲ್ಲ, ಬರ ಘೋಷಣೆಯಾದರೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಜೇಬು ತುಂಬುತ್ತದೆ ಹೊರತು ರೈತರಿಗೆ ಅನುಕೂಲವಾಗುವುದಿಲ್ಲ, ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

  ಅರಸನಾಳು ಗ್ರಾಮದ ಕೆರೆಯಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೂಳೆತ್ತುವ ಕೆಲಸವನ್ನು ಕಳೆದ ಒಂದೂವರೆ ತಿಂಗಳನಿಂದ ಮಾಡುತ್ತಿದ್ದಾರೆ, ಆದರೆ ಕೂಲಿ ಕಾರ್ಮಿಕರಿಗೆ ಈವರೆಗೂ ಒಂದು ಪೈಸೆ ಕೊಟ್ಟಿಲ್ಲ, ಆದರೆ ಸತ್ತವರ ಹೆಸರ್ಲನಲ್ಲಿ ಕಣವಿ ತಾಂಡ, ಅರಸನಾಳು ಗ್ರಾಮದಲ್ಲಿ ಕೈ ಗೊಂಡ ಕೆಲಸದ ಹಣವನ್ನು ಡ್ರಾ ಮಾಡಿಕೊಳ್ಳಲಾಗಿದೆ, ಹಾಲಿ ಕೆಲಸ ಮಾಡುವವರಿಗೆ ಹಣ ನೀಡಿಲ್ಲ ಎಂದು ಅವರು ಆರೋಪಿಸಿದರು.

  ಇನ್ನು 2-3 ದಿನದಲ್ಲಿ ಉದ್ಯೋಗ ಖಾತ್ರಿ ಕೂಲಿ ಹಣ ನೀಡದಿದ್ದರೆ ಹರಪನಹಳ್ಳಿ ತಾ.ಪಂ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ದ್ಯಾಮಜ್ಜಿ ಹನುಮಂತಪ್ಪ, ಮುಖಂಡರಾದ ಅರಸನಾಳು ಯಲ್ಲಪ್ಪ, ಬಾಣದ ಗಂಗಪ್ಪ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link