ಅಪರಿಚಿತರು ಕರೆದರೆ ಹೋಗಬೇಡಿ, ಕೊಟ್ಟಿದ್ದನ್ನು ತಿನ್ನಬೇಡಿ

ದಾವಣಗೆರೆ:

       ಅಪರಿಚಿತರು ಕರೆದರೆ ಯಾವುದೇ ಕಾರಣಕ್ಕೂ ಹೋಗಬಾರದು ಹಾಗೂ ಗುರುತು ಇಲ್ಲದವರು ಕೊಡುವ ತಿಂಡಿ ತಿನ್ನಬಾರದು ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಟಿ.ಎಂ.ಕೊಟ್ರೇಶ್ ಮಕ್ಕಳಿಗೆ ಸಲಹೆ ನೀಡಿದರು.

      ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಲೈಂಗಿಕ ಶೋಷಣೆ ತಡೆ ದಿನದ ಅಂಗವಾಗಿ ಮಕ್ಕಳ ಸಹಾಯವಾಣಿ ಮತ್ತು ಡಾನ್‍ಬಾಸ್ಕೋ ಬಾಲಕಾರ್ಮಿಕರ ಮಿಷನ್ ಯೋಜನೆಯಡಿ ಮಕ್ಕಳು ಮತ್ತು ಪೋಷಕರಿಗಾಗಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ರೀತಿಯ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಪೋಷಕರು ದಿನದ ಹೆಚ್ಚು ಸಮಯವನ್ನು ಮಕ್ಕಳ ಕಾಳಜಿಯ ಬಗ್ಗೆ ಮೀಸಲು ಇಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

      ರೈಲು ನಿಲ್ದಾಣದಿಂದ ತೆರಳುವ ಪ್ರಯಾಣಿಕರ ಕೈ ಬೆರಳ ಉಗುರಿಗೆ ಬಿಳಿ ಬಣ್ಣ ಹಚ್ಚುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಬಣ್ಣ ನೋಡಿದ ತಕ್ಷಣ ಜನರು ತಮ್ಮ ಕರ್ತವ್ಯವನ್ನು ಮರೆಯಬಾರದು ಎನ್ನುವುದರ ಸಂಕೇತವಾಗಿ ಬಿಳಿ ಬಣ್ಣವನ್ನು ಉಗುರಿಗೆ ಹಚ್ಚುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

       ಸಹಾಯವಾಣಿ ಸಂಯೋಜಕ ಮಂಜಾನಾಯ್ಕ ಮಾತನಾಡಿ, ಪೋಸ್ಕೋ ಕಾಯೆಯಡಿ ಅಕ್ಟೋಬರ್ ತಿಂಗಳೊಂದರಲ್ಲಿಯೇ 4 ಪ್ರಕರಣಗಳು ದಾಖಲಾಗಿವೆ. ನಾಪತ್ತೆ ಆಗಿದ್ದ 5 ಪ್ರಕರಣಗಳಲ್ಲಿ ಎಲ್ಲ ಮಕ್ಕಳನ್ನು ಪತ್ತೆಹಚ್ಚಲಾಗಿದೆ. ಕಳೆದ ಆರು ತಿಂಗಳಲ್ಲಿ 48 ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 28 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದ ಪ್ರಕರಣಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದರು.ಈ ಸಂದರ್ಭದಲ್ಲಿ ಡಾನ್‍ಬಾಸ್ಕೋ ಮಕ್ಕಳ ಸಹಾಯವಾಣಿಯ ಬಿ.ರವಿ, ಹಮೀದ್ ಅಲಿ, ಟಿ.ಜ್ಯೋತಿ, ಯು.ವಿ.ಪ್ರಶಾಂತ್, ಬಿ.ಮಂಜುನಾಥ್ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link