ಶ್ರದ್ಧಾ ಭಕ್ತಿಯ ಶ್ರೀವೀರಭದ್ರೇಶ್ವರ ಸ್ವಾಮಿ ಗುಗ್ಗಳ

ದಾವಣಗೆರೆ:

    ನಗರದ ಹಳೇಪೇಟೆಯ ಶ್ರೀವೀರಭದ್ರೇಶ್ವರ ಸ್ವಾಮಿ ಗುಗ್ಗಳ, ಅಗ್ನಿಕುಂಡ ಉತ್ಸವ ಕಾರ್ಯಕ್ರಮ ಗುರುವಾರ ಬೆಳಿಗ್ಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.

      ಈ ಉತ್ಸವದ ಹಿನ್ನೆಲೆಯಲ್ಲಿ ಹೂವು, ಮಾವಿನ ತೋರಣ, ಬಾಳೆ ಕಂದುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಸ್ವಾಮಿಯ ದರ್ಶನಕ್ಕಾಗಿ ಭಕ್ತರ ದಂಡು ಹರಿದು ಬಂದಿತು. ಮಹಿಳೆಯರು, ಮಕ್ಕಳು ಸೇರಿ ಕುಟುಂಬದ ಸದಸ್ಯರೆಲ್ಲ ದೇವಸ್ಥಾನಕ್ಕೆ ಬಂದು ಭಕ್ತಿ ಸಮರ್ಪಿಸಿದರು. ಸ್ವಾಮಿಗೆ ಹಣ್ಣು, ಕಾಯಿ, ನೈವೇದ್ಯ ಅರ್ಪಿಸಿ ಪುನೀತರಾದರು.

     ಎಲ್ಲೆಲ್ಲೂ ವೀರಭದ್ರ ಸ್ವಾಮಿಯ ನಾಮಸ್ಮರಣೆ ಕೇಳಿಬಂದಿತು. ವೀರಭದ್ರೇಶ್ವರ ಮಹಾರಾಜ್ ಕೀ ಜೈ, ಹರ ಹರ ಮಹಾದೇವ ಘೋಷಣೆ ಮೊಳಗಿದವು. ಸಮಾಳದಿಂದ ಹೊರಡುತ್ತಿದ್ದ ಸದ್ದಿಗೆ ಪುರವಂತರು ಹೆಜ್ಜೆ ಹಾಕಿದರು. ಒಡಪುಗಳನ್ನು ಹೇಳಿದರು.ಸಂಪ್ರದಾಯದಂತೆ ಭಕ್ತರ ಸಮ್ಮುಖದಲ್ಲಿ ಗುಗ್ಗಳದ ನಿಶಾನಿ ಹರಾಜು ಮಾಡಲಾಯಿತು. ನಂತರ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮಿಯ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನೆರವೇರಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link