ಪುಸ್ತಕ ಹಂಚುವ ಮೂಲಕ ಹುಟ್ಟುಹಬ್ಬದ ಆಚರಣೆ

ಹುಳಿಯಾರು:

        ಕೃಷ್ಣ ಕೊಳ್ಳ ನೀರಾವರಿ ಹೋರಾಟ ಸಮಿತಿಯ ಸದಸ್ಯರಾದ ಪಿಬಿ ಶ್ರೀನಿವಾಸ್ ಅವರು ಖ್ಯಾತ ಸಾಹಿತಿಗಳ ಪುಸ್ತಕವನ್ನು ಹಂಚುವುದರ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡರು.

        ತಮ್ಮ ಹುಟ್ಟುಹಬ್ಬದ ದಿನವನ್ನು ಎಲ್ಲರಂತೆ ಕೇಕ್ ಕತ್ತರಿಸುವುದು,ಪಾರ್ಟಿ ಮಾಡುವುದರ ಬದಲು ತಮ್ಮ ಸ್ನೇಹಿತರ ವಲಯದಲ್ಲಿ ಓದುವ ಹವ್ಯಾಸವನ್ನು ಬೆಳಸುವಂತೆ ಮಾಡಲು ತಮ್ಮ ಗೆಳಯರ ಬಳಗವನ್ನು ಮನೆಗೆ ಆಹ್ವಾನಿಸಿ ಸಾಹಿತಿಗಳ ಪುಸ್ತಕವನ್ನು ಕೊಂಡುಕೊಂಡು ಉಚಿತವಾಗಿ ವಿತರಿಸುವ ಮೂಲಕ ತಮ್ಮ ಸಾಹಿತ್ಯ ಪ್ರೇಮವನ್ನು ಮೆರೆದರು.

      ಕವಿ ಬಿಳಿಗೆರೆ ಕೃಷ್ಣಮೂರ್ತಿ ಅವರನ್ನು ಕರೆಸಿ ತತ್ವ ಪದವನ್ನು ಹಾಡಿಸುವುದರ ಮೂಲಕ ಹುಟ್ಟುಹಬ್ಬಕ್ಕೆ ವಿಶೇಷತೆ ತಂದರು.ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ನೀಡಲು ಅನುಕೂಲವಾಗುವಂತೆ ಸಾಹಿತಿಗಳ ಹಲವಾರು ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕೂಡ ಮಾಡಿದ್ದರು.

       ಈ ಸಂದರ್ಭದಲ್ಲಿ ಮಾತನಾಡಿದ ಪ್ರೊಫೆಸರ್ ಬಿಳಿಗೆರೆ ಕೃಷ್ಣಮೂರ್ತಿ ಅರವತ್ತು ವರ್ಷದ ಕಾಲಘಟ್ಟ ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ರೀತಿ ಇದ್ದು ನಾವು ಬದುಕಿರುವಷ್ಟು ಕಾಲ ಇನ್ನೊಬ್ಬರಿಗೆ ಸಹ್ಯವಾಗಿರುವಂತೆ,ಸಮುದಾಯಕ್ಕೆ ಬೇಕಾದವನಾಗಿ, ಸಂತೋಷವಾಗಿ ಬಾಳಬೇಕು.ಕಲಿಕೆ ನಿರಂತರವಾಗಿರಬೇಕು.ಒಬ್ಬರನ್ನೊಬ್ಬರು ನೋಡಿ ಕಲಿಯಬೇಕು.ಮನುಷ್ಯ ತನ್ನ ಬದುಕನ್ನು ವಿಸ್ತರಿಸುತ್ತಾ ಸಾಗಿದಂತೆ ಸಮಾಜದ ಒಡನಾಟ ಇಟ್ಟುಕೊಂಡು ಜವಾಬ್ದಾರಿಯುತವಾಗಿ ಬದುಕಬೇಕು ಎಂದರು.

       ಬ್ರಹ್ಮವಿದ್ಯಾ ಸಮಾಜದ ಎಂ.ಆರ್.ಗೋಪಾಲ್ ಮಾತನಾಡಿ ಮನುಷ್ಯ ಹುಟ್ಟಿದ್ದು,ಬಾಳಿದ್ದು ಹೇಗೆ ಎನ್ನುವುದು ಮುಖ್ಯ.ಅರವತ್ತು ವರ್ಷವಾದಾಗ ನಮ್ಮ ಜೊತೆ ಎಷ್ಟು ಜನ ಸ್ನೇಹಿತರಿದ್ದಾರೆ ಎನ್ನುವುದು ಮುಖ್ಯ.ಎಷ್ಟು ಜನ ಆತ್ಮೀಯ ಬಳಗವನ್ನು ನಮ್ಮೊಂದಿಗಿದ್ದಾರೆ ಎನ್ನುವುದು ಮುಖ್ಯ.ಈ ನಿಟ್ಟಿನಲ್ಲಿ ಶ್ರೀನಿವಾಸ್ ಸಣ್ಣ ಹುಡುಗರಿಂದ ಹಿಡಿದು ಹಿರಿಯರವರೆಗೆ ತಮ್ಮದೇ ಆದ ಅಪಾರ ಸಂಖ್ಯೆಯ ಹಿತೈಷಿಗಳ ಬಳಗವನ್ನು ಹೊಂದಿರುವುದು ಅವರ ಸ್ನೇಹಪರತೆಗೆ, ಸಮಾಜಮುಖಿ ಮನೋಭಾವನೆಗೆ, ಸಹೃದಯಕ್ಕೆ ಸಾಕ್ಷಿಯಾಗಿದೆ ಎಂದರು.

       ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವೈ.ಆರ್.ಮಲ್ಲಿಕಾರ್ಜುನಯ್ಯ, ಬೆಸ್ಕಾಂ ಅಧಿಕಾರಿಗಳಾದ ಉಮೇಶ್ ನಾಯಕ್,ಕೆ.ಪಿ ಮಂಜುನಾಥ್,ವರ್ತಕರಾದ ಲೋಕಾ ಪ್ರಭಾಕರ್,ಕಾಂಗ್ರೆಸ್ ಮುಖಂಡ ಅಶೋಕ್,ಜಯ ಕರ್ನಾಟಕ ಸಂಘಟನೆಯ ಮೋಹನ್ ಕುಮಾರ್,ಅನಂತರಾಮು,ತೋಟದ ಮನೆ ಶೇಖರ್,ಪಾತ್ರೆ ಪುಟ್ಟಪ್ಪ,ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರಾಮನಾಥ್,ಬಡಗಿ ರಾಮಣ್ಣ, ರಂಗನಾಥ ಪ್ರಸಾದ್,ಬಾಳೆಕಾಯಿ ಮೋಹನ್,ಆಯಿಲ್ ಮಿಲ್ ನಾಗಭೂಷಣ , ನಾಗರಾಜ್ , ಉಮೇಶ್ , ತಿಮ್ಲಾಪುರ ರವಿ ,ಎಸ್ಸೆಲಾರ್ ಪ್ರದೀಪ್ ಮೊದಲಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link