ಹೊಸಪೇಟೆ :
ವಸ್ತುಗಳ ಧಾನ್ಯಗಳ ವಿನಿಮಯದೊಂದಿಗೆ ಭಾರತೀಯರ ಜೀವನದಲ್ಲಿ ಸಹಕಾರ ತುಂಬಿಕೊಂಡು ನಮ್ಮ ಅವಿಭಾಜ್ಯ ಅಂಗವಾಗಿ ಅಂದು ಇಂದು ಮುಂದೆಯೂ ಇರಲಿದೆ ಎಂದು ಥಿಯೋಸೆಫಿಕಲ್ ಮಹಿಳಾ ಕಾಲೇಜಿನ ಗ್ರಂಥಾಲಯ ಅಧಿಕಾರಿ ಸುಜಾತ ರೇವಣಸಿದ್ದಪ್ಪ ಹೇಳಿದರು.
ಇಲ್ಲಿನ ವಡಕರಾಯ ದೇವಸ್ಥಾನದಲ್ಲಿ 65ನೇ ಸಹಕಾರಿ ಸಪ್ತಾಹ ನಿಮಿತ್ತ ಪ್ರಸನ್ನ ವಿವಿಧೋದ್ದೇಶ ಸಹಕಾರಿ ಹಾಗು ಜಿಲ್ಲಾ ಸಹಕಾರ ಯೂನಿಯನ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಕಾರಿ ಯೂನಿಯನ್ ಅಧ್ಯಕ್ಷ ಜೆ.ಎಂ.ಪ್ರಸಾದ್ ಮಾತನಾಡಿ, ಸಹಕಾರಿ ರಂಗದ ಅಡಿಯಲ್ಲಿ ಯಾವ ಯಾವ ಯೋಜನೆಗಳನ್ನು ಸಹಕಾರ ಇಲಾಖೆ ನಡೆಸುತ್ತಿದೆ ಎಂದು ವಿವರಿಸಿದರು.
ಪ್ರಸನ್ನ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ಜೋಶಿ, ಜಿಲ್ಲಾ ಸಹಕಾರಿ ಯೂನಿಯನ್‍ನ ಅಧಿಕಾರಿ ಲಿಯಾಕತ್ ಅಲಿ, ತಾ.ಪಂ.ಅಧ್ಯಕ್ಷೆ ಜೋಗದ ನೀಲಮ್ಮ, ಸಹಕಾರಿ ಯೂನಿಯನ್‍ನ ನಿರ್ದೇಶಕರಾದ ಬಿ.ರವಿ.ಚಿರಂಜೀವಿ, ಕೆ.ಮಾಧವರಾವ್, ಪೂಜಾರಿ ಈರಣ್ಣ, ಸುರೇಶ್, ನಿರ್ದೇಶಕಿ ನಾಗರತ್ನ, ಹಾಗು ಶಿರಿಷಾ, ಕೆ.ರಾಜು, ಪೂರ್ಣಿಮಾ, ವಿಜಯಕುಮಾರ್, ದೀಪಾ, ಸುರೇಶ, ಕೆ.ಮಲ್ಲಯ್ಯ, ಗರಗಪ್ಪ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







