ಹಾನಗಲ್ಲ :
ಮಾನಸಿಕವಾಗಿ ಅಸ್ವಸ್ಥಗೊಂಡ ವ್ಯಕ್ತಿಯೊಬ್ಬನನ್ನು ಗುರುತಿಸಿ ಉಪಚರಿಸಿ ಅವನ ವಿಳಾಸ ಪಡೆದು ಮಂಗಳವಾರ ಅವನನ್ನು ತವರಿಗೆ ತಲುಪಿಸಿದ ಘಟನೆ ಹಾನಗಲ್ಲಿನಲ್ಲಿ ನಡೆದಿದೆ.
ಹಾನಗಲ್ಲಿನಲ್ಲಿ ಅಪರಿಚಿತವಾಗಿ ಮಾನಸಿಕ ಅಸ್ವಸ್ಥೆಯಿಂದ ಓಡಾಡುತ್ತಿದ್ದ ಧಾರವಾಡದ ವಿಶ್ವನಾಥ ಹಿರೇಮಠ ಎಂಬ ವ್ಯಕ್ತಿಯನ್ನು ಪಟ್ಟಣದ ಸ್ನೇಹಾ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಪೂಜಾರ ಗುರುತಿಸಿ ಪರಿಚಯಿಸಿಕೊಂಡು, ಆ ವ್ಯಕ್ತಿಯನ್ನು ಉಪಚರಿಸಿ ವಿಳಾಸ ಪಡೆದು ತವರಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವನಾಥ ಹಿರೇಮಠ ಎಂಬ ವ್ಯಕ್ತಿ ಕಳೆದ 7 ತಿಂಗಳ ಹಿಂದೆಯೇ ಮನೆಯಿಂದ ಹೊರಟವನ್ನು ಅಲ್ಲಲ್ಲಿ ತಿರುಗಾಡಿಕೊಂಡು ಅಂದಾಜು 15 ದಿನಗಳ ಹಿಂದ ಹಾನಗಲ್ಲಿಗೆ ಬಂದು ಅಲ್ಲಲ್ಲಿ ತಿರುಗಾಡುತ್ತಿದ್ದನೆನ್ನಲಾಗಿದೆ. ಈ ತಿರುಗಾಡುವ ವ್ಯಕ್ತಿಯು ಪಟ್ಟಣದ ವಿವೇಕಾನಂದ ನಗರದಲ್ಲಿ ಅನಾರೋಗ್ಯದಿಂದಾಗಿ ತೆವಳಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದುದನ್ನು ಗಮನಿಸಿದ ಮಧುಮತಿ ಪೂಜಾರ ಕರುಣೆಯಿಂದ ಈ ವ್ಯಕ್ತಿಯನ್ನು ಮಾತನಾಡಿಸಿ ಅವನ ಸ್ಥಿತಿಯ ಬಗ್ಗೆ ತಿಳಿಯಲು ಹೋದಾಗ, ಈತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.
ಆದರೆ ಮಧುಮತಿ ಪೂಜಾರ ಇಷ್ಟಕ್ಕೆ ಸುಮ್ಮನಿರದೇ ಬಹಳಷ್ಟು ಪ್ರಯತ್ನಿಸಿ, ಮಾತನಾಡಿಸಿ, ಅಸ್ಪಷ್ಟವಾಗಿಯಾದರೂ ಅವನ ಮಾಹಿತಿ ಪಡೆದು, ಅವರ ಮನೆ ವಿಳಾಸ ತಿಳಿದು, ಧಾರವಾಡದಲ್ಲಿ ತಮ್ಮ ಅಕ್ಕನೊಂದಿಗೆ ಮಾತನಾಡಿದಾಗ ಈ ಅಸ್ವಸ್ಥನ ನಿಜವಾದ ವಿಳಾಸ ತಿಳಿದಿದೆ. ಆಗ ಅವರಿಗೆ ಫೋನಾಯಿಸಿ ಕರೆಸಿಕೊಂಡು ಮಂಗಳವಾರ ಸಾರ್ವಜನಿಕರ ಸಹಾಯದಿಂದ ವಂತಿಗೆ ಬಟ್ಟೆ ಪಡೆದು ಅವನ ಊರಿಗೆ ಅವನ ಪಾಲಕರೊಂದಿಗೆ ಕಳಿಸಿಕೊಟ್ಟ ಮಾನವೀಯ ಘಟನೆ ನಡಿದಿದೆ.
ಈ ಸಂದರ್ಭದಲ್ಲಿ ಈರಣ್ಣ ಹುಗ್ಗಿ, ಚನ್ನವೀರಸ್ವಾಮಿ ಹಿರೇಮಠ, ಆದರ್ಶ ಶೆಟ್ಟಿ, ಪ್ರಶಾಂತ ಗೊಂದಿ, ಎನ್.ಎಂ.ಪುಜಾರ ಸಹಾಯ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ