ಕೊಟ್ಟೂರು
ಪ್ರತಿಯೊಂದು ಮಗುವೂ ದಿನವೂ ಶಾಲೆಗೆ ತಪ್ಪದೆ ಬಂದು ದೈನಂದಿನ ಚುಟುವಟಿಕೆ ಹಾಗೂ ಸ್ವಚ್ಚತೆ ಮತ್ತು 6ರಿಂದ 16 ವರ್ಷದ ಮಕ್ಕಳು ಶಾಲೆಯಿಂದ ಹೊರಗುಳಿದರೆ ಅವರನ್ನು ಶಾಲೆಗೆ ಬರುವಂತೆ ಪ್ರೋತ್ಸಾಹಿಸಬೇಕೆಂದು ಸಿಆರ್ಪಿ ಸಂತೋಷ ಹೇಳಿದರು.
ಕೊಟ್ಟೂರ ತಾಲೂಕಿನ ರಾಂಪುರ ಗ್ರಾಮದಲ್ಲಿ ಡಾನ್ಬಸ್ಕೋ ಮತ್ತು ಗ್ರಾಮ ಪಂಚಾಯ್ತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಡಾನ್ ಬಸ್ಕೋ ಸಂಸ್ಥೆ ತಾಲೂಕು ಸಂಯೋಜಕ ಗೋಣಿಬಸಪ್ಪ, ಮಕ್ಕಳ ಪ್ರಮುಖ ಹಕ್ಕುಗಳಲ್ಲಿ ಭಾಗವಹಿಸುವ ಹಕ್ಕು ಸಹಾ ಒಂದು. ಈ ಗ್ರಾಮ ಸಭೆಯ ಉದ್ದೇಶ ಶಾಲೆಯಲ್ಲಿನ ಮಕ್ಕಳಿಗೆ ಕುಂದುಕೊರತೆಗಳು ಹಾಗೂ ಪಠ್ಯ ಅರ್ಥವಾಗದೆ ಇರುವುದು. ಪೌಷ್ಟಿಕ ಆಹಾರದ ಕೊರತೆ, ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಸಭೆಯಲ್ಲಿ ಹೆಚ್. ಕವಿತಾ, ಶಾಲೆಯಲ್ಲಿ ಶೌಚಾಲಯ ಕೊರತೆ, ಎಸ್. ಮೇಘನಾ ಆಟದ ಮೈದಾನ ಸಮತಟ್ಟು ಮಾಡುವುದು. ಯು. ರಾಧಿಕ, ಶಾಲೆಯ ಮುಂದಿರುವ ರಸ್ತೆಯ ಎರಡು ಬದಿಯಲ್ಲಿ ಚರಂಡಿ ನಿರ್ಮಿಸುವುದು. ಗಣೇಶ, ಗೇಟ್ ಹಾಗೂ ಕಾಂಪೌಂಡ್ ನಿರ್ಮಾಣ, ಸೌಭಾಗ್ಯ, ಬೆಂಚ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಈ ವಿದ್ಯಾರ್ಥಿಗಳು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಶಶಿಧರ ಅವರನ್ನು ಮನವಿ ಮಾಡಿದರು.
ಗ್ರಾ.ಪಂ. ಸದಸ್ಯರಾದ ರೇವಣ್ಣ, ಕಲ್ಲಮ್ಮ, ಸರಸ್ವತಿ, ಭಾಗ್ಯಮ್ಮ, ಲಕ್ಷ್ಮೀದೇವಿ, ಮತ್ತು ಶಾಲಾ ಮುಖ್ಯ ಗುರುಗಳಾದ ಡಿ. ಹಾಲಪ್ಪ, ಶಿಕ್ಷಕರಾದ ತಿಪ್ಪೇಸ್ವಾಮಿ, ರೇಣುಕಮ್ಮ, ಎಸ್. ವೀರಮ್ಮ, ಜಿ.ಎಂ. ಶಿವಪ್ರಕಾಶ, ಡಿ. ಉಷಾರಾಣಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಗ್ರಾಮ ಪಂಚಾಯ್ತಿ ಗುಮಾಸ್ತ ಓಬಪ್ಪ ಸ್ವಾಗತಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ