ದಾವಣಗೆರೆ:
ಮಾಜಿ ಸಂಸದರಾದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಮತ್ತು ಇವರ ಧರ್ಮಪತ್ನಿ ದಿ|| ಜಿ.ಎಂ. ಹಾಲಮ್ಮ ಅವರುಗಳ ಪುಣ್ಯಸ್ಮರಣೆ ಪ್ರಯುಕ್ತ ಮಂಗಳವಾರ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು.
ಈ ರಕ್ತದಾನ ಶಿಬಿರದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು 110 ಯೂನಿಟ್ ರಕ್ತವನ್ನು ದಾನ ಮಾಡಿದರು.ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಜಿ.ಮಂಜುನಾಥ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಪ್ರಕಾಶ್, ರೆಡ್‍ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ. ಎ.ಎಂ. ಶಿವಕುಮಾರ್, ಕ್ಲಸ್ಟರ್ ಮುಖ್ಯಸ್ಥ ಪ್ರಕಾಶ್ ಗಡಿಯಾರ್, ಕಾರ್ಯದರ್ಶಿ ಅನಿಲ್ ಬಾರೆಂಗಳ್, ವಿದ್ಯಾನಗರ ಲಯನ್ಸ್ ಕ್ಲಬ್ ಸಂಯೋಜಕ ಹೆಚ್.ಎನ್. ಶಿವಕುಮಾರ್, ಜಿಎಂಐಟಿ ಸಂಯೋಜಕ ಡಾ. ಗುರುಮೂರ್ತಿ. ಹೆಚ್.ಎಸ್. ಓಂಕಾರಪ್ಪ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
