ತಿರುವನಂತಪುರ:
ಇತ್ತೀಚೆಗೆ ವಿವಾದದ ಕೇಂದ್ರ ಬಿಂದುವಾಗಿರುವ ಶಬರಿಮಲೆ ಅಯ್ಯಪ್ಪನ ದೇಗುಲವನ್ನು ಮತ್ತೊಂದು ಅಯೋದ್ಯೇ ಶ್ರೀರಾಮ ಮಂದಿರವಾಗಲು ಅವಕಾಶ ನೀಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ವಿ ಹೆಚ್ ಪಿ ಗೆ ತಿರುಗೇಟು ನೀಡಿದ್ದಾರೆ.
ಈ ವಿವಾದ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಕರ ಸೇವಕರ ಮೂಲಕ ಸಂಘ ಪರಿವಾರದವರು ಶಬರಿಮಲೆಯನ್ನು ಹೈಜಾಕ್ ಪಿತೂರಿ ನಡೆಸುತ್ತಿದ್ದಾರೆ. ನಂಬಿಕೆಯ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ವಿಜಯನ್ ಇಂದು ಪತ್ರಿಕಾಘೋಷ್ಟಿಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








