ಹೆಸರು ಬದಲಿಸಿಕೊಂಡ ಜಯಂ ರವಿ : ಕಾರಣ ಏನು ಗೊತ್ತಾ…?

ಚೆನ್ನೈ

   ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ತಮಿಳು ನಟ ಜಯಂ ರವಿ   ಇದೀಗ ಹೆಸರು ಬದಲಿಸಿಕೊಂಡಿದ್ದಾರೆ. ಜಯಂ ರವಿ ಇನ್ನುಮುಂದೆ ರವಿ ಮೋಹನ್ ಆಗಿ ಗುರುತಿಸಲ್ಪಡಲಿದ್ದಾರೆ. ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರುತ್ತಾ ತಾವು ಇಲ್ಲಿವರೆಗೆ ಜಯಂ ರವಿಗೆ ನೀಡಿದ ಬೆಂಬಲವನ್ನು ರವಿ ಮೋಹನ್ ಹೆಸರಿಗೂ ನೀಡಬೇಕು ಎಂದು ಮನವಿ ಮಾಡಿದ್ದಾರೆ. 

   ಜಯಂ ರವಿ, ರವಿ ಮೋಹನ್ ಆಗಿ ಹೆಸರು ಬದಲಾಯಿಸಿಕೊಳ್ಳುವುದರ ಜೊತೆಗೆ ಹೊಸ ಪಯಣ ಕೂಡ ಆರಂಭಿಸಿದ್ದಾರೆ. ‘ರವಿ ಮೋಹನ್ ಸ್ಟುಡಿಯೋಸ್’ ಎಂಬ ಹೆಸರಿನ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಒಳ್ಳೆ ಒಳ್ಳೊಳ್ಳೆ ಸಿನಿಮಾಗಳನ್ನು, ನಿರ್ದೇಶಕರು ಹಾಗೂ ಹೊಸ ನಾಯಕರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುವುದಾಗಿ ರವಿ ಮೋಹನ್ ಘೋಷಣೆ ಮಾಡಿದ್ದಾರೆ.

   ರವಿ ಮೋಹನ್ ತಮ್ಮನ್ನು ಇಲ್ಲಿವರೆಗೆ ಬೆಳೆಸಿದ, ಬೆಂಬಲಿಸಿ ಅಭಿಮಾನಿಗಳಿಗೆ ಏನಾದರೂ ಮರಳಿ ಕೊಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕಾಗಿ ರವಿ ಮೋಹನ್ ಫ್ಯಾನ್ಸ್ ಕ್ಲಬ್‌ಗಳು ರವಿ ಮೋಹನ್ ಫ್ಯಾನ್ಸ್ ಫೌಂಡೇಷನ್ ಎಂಬ ರಚನಾತ್ಮಕ ಸಂಸ್ಥೆಯಾಗಿ ಪರಿವರ್ತನೆಯಾಗಿವೆ. ಈ ಫೌಂಡೇಷನ್ ಮೂಲಕ ಅಗತ್ಯವಿರುವ ಎಲ್ಲರಿಗೂ ಸಹಾಯ ಮಾಡುವುದಾಗಿ ರವಿ ಮೋಹನ್ ತಿಳಿಸಿದ್ದಾರೆ.

   ರವಿ ಮೋಹನ್‌ ನಾಯಕರಾಗಿ ಕಾಣಿಸಿಕೊಂಡ ಹೊಸ ತಮಿಳು ಚಿತ್ರ ʼಕಾದಲಿಕ್ಕ ನೇರಮಿಲ್ಲೈʼ ಸಂಕ್ರಾಂತಿ ಪ್ರಯುಕ್ತ ಜ. 14ರಂದು ತೆರೆಕಂಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಮೊದಲ ಬಾರಿ ನಿತ್ಯಾ ಮೆನನ್‌ ನಟಿಸಿದ್ದಾರೆ.

Recent Articles

spot_img

Related Stories

Share via
Copy link