ಮಂಡ್ಯ:

ಮಂಡ್ಯ ಜಿಲ್ಲೆಯ ಶಿವನ ಸಮುದ್ರ ಎಸ್ಬಿಆರ್ ಕೆರೆಯಲ್ಲಿ ಜೋಡಿ ಶವ ಪತ್ತೆಯಾಗಿತ್ತು. ಮೊದಲ ದಿನ ಗಂಡನ ಶವ ಪತ್ತೆಯಾದರೆ ಒಂದು ದಿನದ ಬಳಿಕ ಪತ್ನಿಯ ಶವ ಪತ್ತೆಯಾಗಿತ್ತು.
ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಸ್ವಾತಿ ತಿಗಳ ಸಮುದಾಯಕ್ಕೆ ಸೇರಿದ್ದು ಅದೇ ಗ್ರಾಮದಪರಿಶಿಷ್ಟ ಜಾತಿಯ ಯುವಕ ನಂದೀಶನನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದು ಪೋಷಕರ ವಿರೋಧದ ನಡುವೆಯೂ ಮದುವೆಯಾಗಿ ಹೊಸೂರಿನಲ್ಲಿ ವಾಸವಾಗಿದ್ದರು.
ಹೊಸೂರಿನಲ್ಲಿ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ತೆರಳಿದ್ದ ಸಂಧರ್ಭದಲ್ಲಿ ಗ್ರಾಮದವರು ನೋಡಿದ್ದು ಸ್ವಾತಿಯ ತಂದೆಗೆ ವಿಷಯವನ್ನು ತಿಳಿಸಿದ್ದಾರೆ ಅವರಿಬ್ಬರನ್ನು ಪತ್ತೆ ಹಚ್ಚಿದ ಸ್ವಾತಿಯ ತಂದೆ ಹಾಗೂ ಸಂಬಂಧಿಕರು ಇವರಿಬ್ಬರನ್ನು ಹೊಸೂರಿನಿಂದ ಕನಕಪುರ ಮಾರ್ಗವಾಗಿ ಟಾಟಾ ಸುಮೋದಲ್ಲಿ ಶಿವನಸಮುದ್ರ ಬಳಿ ಕರತಂದು ಹಲ್ಲೆ ಮಾಡಿ ಜೀವಂತವಾಗಿ ನದಿಗೆ ಎಸೆದಿದ್ದಾರೆ.
ಇಬ್ಬರನ್ನೂ ಜೀವಂತವಿರುವಾಗಲೇ ಕಾಲುಗಳನ್ನು ಕಟ್ಟಿ ನದಿಗೆ ಎಸೆದಿದ್ದರು. ಆ ತಂದೆಗೆ ಮಗಳ ಜೀವಕ್ಕಿಂತಲೂ ಜಾತಿಯೇ ದೊಡ್ಡದಾಯ್ತಾ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








