ಜನಸ್ಪಂದನ ಕಾರ್ಯಕ್ರಮದಲ್ಲಿ ಮಾರ್ಧನಿಸಿದ ಎನ್.ಹೆಚ್.206 ರ ಸಂತ್ರಸ್ತರ ಅಳಲು

ತಿಪಟೂರು :

     ತಾಲ್ಲೂಕಿನ ಕೆ.ಬಿ.ಕ್ರಾಸ್‍ನಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಮತ್ತು ಎಲ್ಲಾ ಇಲಾಖೆಗಳ ಕುಂದುಕೊರತೆಗಳ ಸಭೆಯಲ್ಲಿ ಮುಖ್ಯವಾಗಿ ಎನ್.ಹೆಚ್.206ರ ವಿಸ್ತರಣೆಗೆ ಜಮೀನುಗಳನ್ನು ಕಳೆದು ಕೊಂಡವರ ಸಮಸ್ಯೆಯೇ ಮುಖ್ಯವಾಗಿತ್ತು.

       ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಜಿಲ್ಲಾಧಿಕಾರಿಗಳು ನೀವು ಅರ್ಜಿಸಲ್ಲಿದ 15 ದಿಗಳೊಗಾಗಿ ನಿಮಗೆ ಸಲ್ಲಿಸಬೇಕು ಆದಾಗಲಿಲ್ಲ ಎಂದರೆ ಸುಮ್ಮಸುಮ್ಮನೆ ಅಲೆದಾಡಿಸುವಂತಿಲ್ಲ ಮತ್ತು ಸುಮ್ಮನೇ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ, ತಿರರಸ್ಕರಿಸಿದ್ದಕ್ಕೆ ಸೂಕ್ತದಾಖಲೆ ಕಾರಣವಿರಬೇಕು, ನಿಮ್ಮ ದಾಖಲೆಗಳು ಸರಿಯಿದ್ದು ಹಾಗೇನಾದರು ಮಾಡಿದರೆ ಅವರ ಮೇಲೆ ನಿರ್ದಾಕ್ಷೀಣ್ಯ ಕ್ರಮಜರುಗಿಸಲಾಗುವುದೆಂದರು.

       ಶಾಸಕ ಬಿ.ಸಿ.ನಾಗೇಶ್ ಮಾತನಾಡಿ ಮೊದಲು ಗ್ರಾಮಪಂಚಾಯಿತಿಗಳಲ್ಲಿ ಜಮಾಬಂದಿಯನ್ನು ಗೋಡೆಯಮೇಲೆ ಬರೆಯುತ್ತಿದ್ದರು ಇಂದು ಅದುನಿಂತಿದ್ದು ಯಾವುದಕ್ಕೆ ಏನು ಖರ್ಚುಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ ಇದನ್ನು ಬರೆಯುವಂತಾಗಬೇಕು, ಮೊದಲು ಒಂದೇ ರಸ್ತೆಗೆ 2-3 ಬಿಲ್ಲುಗಳನ್ನು ಮಾಡುತ್ತಿದ್ದರು ಇದನ್ನು ತಪ್ಪಿಸಲು ಅಟಲ್ ಬಿಹಾರಿ ವಾಜಪೇಯಿರವರು ಕಾಮಾಗಾರಿಯ ಹೆಸರು ಮತ್ತು ಎಲ್ಲಿಂದ ಪ್ರಾರಂಭವಾಗಿ ಎಲ್ಲಿಗೆ ಮುಗಿಯುತ್ತದೆ ಅದರ ನಿರ್ವಹಣೆ ಯಾರದ್ದು ಎಂಬುದನ್ನು ದಾಖಲಿಸುವಂತಾಗಿದೆ.

      ಆದ್ದರಿಂದ ಸರ್ಕಾರ ಮತ್ತು ಜನಗಳ ನೇರಸಂಪರ್ಕಕ್ಕೋಸ್ಕರ ಈ ಜನಸ್ಪಂದನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಇಲ್ಲಿ ನಿಮ್ಮ ಸಹಭಾಗಿತ್ವ ಮುಖ್ಯವಾದುದು ನೀವು ದೂರುಗಳನ್ನು ಸಲ್ಲಿಸುವುದರ ಜೊತೆ ಸೂಕ್ತವಾದ ಸಲಹೆಗಳನ್ನು ನೀಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

        ಕಾಮಗೊಂಡನಹಳ್ಳಿ ಶಿವಣ್ಣ ಮಾತನಾಡುತ್ತಾ ನಮ್ಮ ಜಮೀನುಗಳು ರಾಷ್ಟ್ರೀಯ ಹೆದ್ದಾರಿ 206 ಹೋಗುತ್ತಿವೆ ಮತ್ತು ಮನೆಗಳನ್ನು 15ದಿನಗಳೊಳಗಾಗಿ ಖಾಲಿಮಾಡಲು ನೋಟೀಸ್ ನೀಡಿರುತ್ತಾರೆ ಮತ್ತು ಪರಿಹಾರ ಬೇಕೆಂದರೆ 79ಎ & 79ಬಿ ಗೆ ಬೇಕಾಗುವ 16ದಾಖಲೆಗಳು ಮತ್ತು 40 ವರ್ಷದ ಪಹಣಿಯನ್ನು ಕೇಳಿದ್ದಾರೆ. ನಾವಿಂದು ತಾಲ್ಲೂಕು ಕಛೇರಿಗೆ ಹೋಗಿ ಅರ್ಜಿ ಸಲ್ಲಿಸಿದರೆ ನಮಗೆ ದಾಖಲೆಗಳನ್ನು ನೀಡಲು ಸುಮಾರು 30 ರಿಂದ 40 ದಿನಗಳಾಗುತ್ತವೆ ಆದ್ದರಿಂದ ಇದನ್ನು ಬಗೆಹರಿಸಬೇಕಾಗಿ ಡಿ.ಸಿ.ಯವರಿಗೆ ತಮ್ಮ ಅಳಲನ್ನು ತೊಡಿಕೊಂಡರು.

         ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಇವರ ದೂರನ್ನು ಆಲಿಸಿ ನೀವು ದಾಖಲೆಗಳಿಗೆ ಅಲೆಯುವುದು ಬೇಡ ನಾವು ತಾಹಸೀಲ್ದಾರರಿಗೆ ಆದೇಶದ ಮಾಡಿ ಸಂತ್ರಸ್ತರ ಪಟ್ಟಿ ಮತ್ತು ಎಲ್ಲಾ ದಾಖಲೆಗಳನ್ನು ನೀಡುವಂತೆ ತಿಳಿಸುತ್ತೇನೆಂದರು.

        ಹಾಲುಶೇಖರಣಾ ಘಟಕದ ದುರ್ವಾಸನೆ : ಬಿಳಿಗೆರೆ ಗ್ರಾಮ ಪಂಚಾಯಿತಿ ಸದಸ್ಯರ ಮತ್ತು ಕೆ.ಬಿ.ಕ್ರಾಸ್ ವಾಸಿ ಶಂಕರಪ್ಪ ಇಲ್ಲಿನ ಹಾಲು ಶೇಖರಣಾ ಘಟಕದಿಂದ ದುರ್ವಾಸನೆ ಬರುತ್ತಿದ್ದು ಪಕ್ಕದಲ್ಲೇ ಅಂಗನವಾಡಿ ಇದ್ದು ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಎಂದು ದೂರಿದರು ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಇದರ ಬಗ್ಗೆ ನಾನು ಹಾಲುಮಂಡಳಿಯ ವ್ಯವಸ್ಥಾಪಕರ ಹತ್ತಿರ ಮಾತನಾಡಿ ನಾನು ಇದನ್ನು ಸರಿಪಡಿಸುವುದಾಗಿ ತಿಳಿಸಿದರು.

        ಕೆ.ಬಿ.ಕ್ರಾಸ್‍ನ ನೀರಿನ ಸಮಸ್ಯೆ: ದೂರಿಗೆ ಉತ್ತರಿಸಿದ ಶಾಸಕ ನಾಗೇಶ್ ಈಗ ಇಲ್ಲಿನ ಬೋರ್‍ವೆಲ್‍ಗಳಲ್ಲಿ ಅಂತರ್ಜಲದ ಸಮಸ್ಯೆ ಇದೆ ಈಗ ಇಲ್ಲಿಗೆ ಕುಂದೂರಿನಿಂದ ನೀರನ್ನು ಒದಗಿಸಲಾಗುತ್ತಿದೆ ಈಗ ಗಡಬನಹಳ್ಳಿಯ ತೋಪಿನಿಂದ ಸದಸ್ಯದಲ್ಲೆ ನೀರೊದಗಿಸುವ ಕಾರ್ಯಯೋಜನೆ ತಯಾರಾಗಿದೆ ಸ್ವಲ್ಪದಿನಗಳಲ್ಲೇ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದರು.

         ಹೆಚ್ಚಿನ ದೂರುಗಳು ಕಂದಾಯ ಇಲಾಖೆಗೆ ಸಂಬಂದಪಟ್ಟವಾಗಿದ್ದು ಮುಖ್ಯವಾಗಿ ಚೌಡ್ಲಾಪುರ ಸರ್ವೇನಂಬರ್ 12 ರಲ್ಲಿ ಯಾರಿಗೂ ಖಾತೆಯಾಗಿಲ್ಲ ಎಂದಿದ್ದಕ್ಕೆ ಜಿಲ್ಲಾಧಿಕಾರಿವರು ಕಂದಾಯ ಇಲಾಖೆ, ಅರಣ್ಯ ಇಲಾಖೆಯಿಂದ ಜಂಟಿ ಸರ್ವೇಮಾಡಿಸಿ ಸಂಬಂಧಪಟ್ಟವರಿಗೆ ಶಿಘ್ರವಾಗಿ ಮಂಜೂರು ಮಾಡಲು ಸೂಚಿಸಿದರು.

          ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಬಜಗೂರು ಮಂಜುನಾಥ್, ತಾಲ್ಲೂಕು ಉಪವಿಭಾಗಾಧಿಕಾರಿ ಪೂವಿತ.ಎಸ್, ದಂಡಾಧಿಕಾರಿ ಡಾ.ಮಂಜುನಾಥ್, ಬಿ.ಇ.ಓ ಮಂಗಳಗೌರಮ್ಮ ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಜನರು ಸಮಸ್ಯೆಗಳಿಗೆ ದೂರುಗಳನ್ನು ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link