ಮಧುಗಿರಿ :
ಒಂದೇ ಗ್ರಾಮ ಹಾಗೂ ಸಮುದಾಯಕ್ಕೆ ಸೇರಿದ ಮೂವರು ವೃದ್ದ ಮಹಿಳೆಯರು ಅನುಮಾಸ್ಪದವಾಗಿ ಮೃತ ಪಟ್ಟಿರುವ ತಡವಾಗಿ ಬೆಳಕಿಗೆ ಬಂದಿದೆ.ತಾಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಾ ಸಂದ್ರ ಗ್ರಾಮದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಗ್ರಾಮದ ಮುತ್ತರಾಯಸ್ವಾಮಿ , ಕರಿಯಮ್ಮ ದೇವರುಗಳಿಗಾಗಿ ಹರಿಸೇವೆ ಕ್ರಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು.
ಗ್ರಾಮದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಹಬ್ಬವನ್ನು ನಾಯಕ ಸಮುದಾಯವರೆಲ್ಲಾ ಆಚರಿಸಿದ್ದರು.ಆದರೆ ಶನಿವಾರ ಕಾರ್ಯಕ್ರಮ ನೋಡಿ ಖುಷಿಯಿಂದ ಇದ್ದ ಗ್ರಾಮದ ವೃದ್ಧ ಮಹಿಳೆಯರಾದ ತಿಮ್ಮಕ್ಕ (80) ವಯೋ ಸಹಜ ಮತ್ತು ಗಿರಿಯಮ್ಮ (75) ಎನ್ನುವರು ರಕ್ತ ವಾಂತಿ ಭೇದಿ ಯಿಂದ ಬಳಲಿ ಶನಿವಾರ ಮೃತಪಟ್ಟಿದ್ದಾರೆ.
ಗ್ರಾಮದ ದೇವರುಗಳಿಗೆ ಹರಿಸೇವೆಗಾಗಿ ಗ್ರಾಮದ ದೇವಾಲಯದ ಬಳಿ ಅನ್ನ ಸಾಂಬರ್ , ಹೆಸರು ಬೆಳೆ , ಪಾಯಸವನ್ನು ಮಾಡಲಾಗಿತ್ತು ಶನಿವಾರ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಶೇ.90 ರಷ್ಟು ಜನರು ಸೂತಕದ ಹಿನ್ನೆಲೆಯಲ್ಲಿ ಪ್ರಸಾದವನ್ನು ಸೇವಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.
ವಾಂತಿ ಭೇದಿಯಿಂದ ಬಳಲಿದ ಕಾಟಮ್ಮ ( 50)ಎನ್ನುವವರು ಇದೇ ಗ್ರಾಮದವರಾಗಿದ್ದು ನೆರೆಯ ಮಡಕಶಿರಾ ದಿಂದ ಹಬ್ಬಕ್ಕೆಂದು ತವರು ಮನೆಗೆ ಬಂದಿದ್ದರೆಂದು ಇವರು ಸಹ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗ್ರಾಮದಲ್ಲಿ ತಾತ್ಕಲಿಕವಾಗಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಇಓ ರವರು ಮತ್ತು ವೈದ್ಯಾಧಿಕಾರಿಗಳು ಭೇಟಿ ನೀಡಿ ವೃದ್ಧ ಮಹಿಳೆಯರ ಸಾವಿನ ಕಾರಣಗಳನ್ನು ಹುಡುಕಾಟ ನಡೆಸುತ್ತಿದ್ದು ಗ್ರಾಮದಲ್ಲಿ ಆತಂಕದಲ್ಲಿ ಜನರಿರುವುದು ಕಂಡು ಬರುತ್ತಿದೆ