ರಾಣಿಬೆನ್ನೂರ:
ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಬುಧವಾರ ಈದ್ ಮೀಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅದ್ದೂರಿ ಮೆರವಣಿಗೆಯ ಮೂಲಕ ಸಡಗರ, ಸಂಭ್ರಮದಿಂದ ಆಚರಿಸಿದರು.
ಈದ್ ಮೀಲಾದ ಮೆರವಣಿಗೆಗೆ ಅಲಂಕೃತಗೊಂಡ ವಿವಿಧ ಬಗೆಯ ಗುಂಬಜ, ಸ್ಥಬ್ದ ಚಿತ್ರಗಳು ಹೆಚ್ಚಿನ ಮೆರಗು ತಂದವು. ಮಕ್ಕಳು ಸೇರಿದಂತೆ ಹಿರಿಯರು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮುಸ್ಲಿಂ ಮುಖಂಡ ಇದಾಯತವುಲ್ಲಾ ಶೇಖಸನದಿ, ಬಸವಣ್ಣೆಪ್ಪ ಹೆಗ್ಗಪ್ಪನವರ, ಮುಬಾರಕ್ ಅಲಿ, ರಹಮತವುಲ್ಲಾ ಶೇಖಸನದಿ, ಮುಸ್ತಾಫ ಶೇಖಸನದಿ, ಮುಬಾರಕ್ ಅವರಗೊಳ್ಳ, ಅಲ್ಲಾಭಕ್ಷ ಸೇರಿದಂತೆ ನೂರಾರು ಮುಸ್ಲೀಂ ಬಾಂಧವರು ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ