ಹಾನಗಲ್ಲ :
ಶ್ರವಣದೋಷ ಮಕ್ಕಳಿಗೆ ಸಾಮಾಜದಲ್ಲಿ ಉತ್ತಮ ಮಟ್ಟ ತಲುಪಲು ಉತ್ತಮ ಶಿಕ್ಷಣದ ಜೊತೆಗೆ ಅವರ ಹಕ್ಕುಗೊಳ್ಳನ್ನು ನೀಡುವ ಜವಾಬ್ದಾರಿಯಾದಾಗ ಮಾತ್ರ ಸಮಾಜದಲ್ಲಿ ಅವರಿಗೆ ಉನ್ನತ ಸ್ಥಾನಹೊಂದಲು ಸಾದ್ಯ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಜೆ.ಕೆ.ಹಡಪದ ತಿಳಿಸಿದರು.
ಬುಧವಾರ ತಾಲೂಕಿನ ಹಿರೆಹುಲ್ಲಾಳ ಗ್ರಾಮದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಇವರ ಸಂಯುಕ್ತ ಆಶ್ರಯದ ವತಿಯಿಂದ ನಡೆದ ಚೈಲ್ಡ್ ಲೈನ್ ಸೇ ದೋಸ್ತಿ ವಿಕ್ ಕಾರ್ಯಕ್ರಮದ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ತಮ್ಮದೆ ಆದ ಹಕ್ಕುಗಳಿವೆ ಅವುಗಳ ಬಗ್ಗೆ ಅರಿವು ಮೂಡಿಸಬೇಕಾದ ಅವಶ್ಯಕತೆಯಿದೆ ಅಂತಹ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಹಾನಗಲ್ಲ ರೋಶನಿ ಸಮಾಜ ಸೇವಾ ಸಂಸ್ಥೆ ಮಾಡುತ್ತಿರುವುದು ಶಾಘನೀಯ ಎಂದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳಾದ ಆರ್. ಪಿ. ಹಡಪದ್. ಸಿಬ್ಬಂದಿಗಳಾದ ದೇವಪ್ಪ, ಮಾಲತೇಶ ಬಾರ್ಕಿ. ಸಹಶಿಕ್ಷಕರಾದ ಎಸ್, ಡಿ, ಬಡಿಗೆರ್. ಹೆಚ್. ಎನ್ ಸವಣೂರ, ಎಲ್ ಪೂಜಾರ, ಎಸ್ ಶಿಕಾರಿಪುರ, ಎನ್,ಎನ್ ಜಾನಗುಂಡಿ, ಆರ್ ಪೂಜಾರ. ಆರ್ ಜಿ ಮಡಿವಾಳರ, ಎಸ್ ಡಿ,ಎಮ್,ಸಿ ಅಧ್ಯಕ್ಷರಾದ ಕರಿಗೌಡ್ರ, ಚೆನ್ನಗೌಡ್ರ. ಮತ್ತು ಮಕ್ಕಳ ಸಹಾಯವಾಣಿ ಸಂಯೋಜಕರಾದ ಪ್ರೇಮಾ ಅಟವಾಳಗಿ, ಸಿಬ್ಬಂದಿಗಳಾದ ಮೈಲಾರಪ್ಪ ಹಾಳಗಲ್ಲಾಪುರ, ಸಾದಿಕ ಮಲ್ಲಿಗಾರ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
