ಸರ್ವಜನ ಶ್ರದ್ಧಾಂಜಲಿ ಸಭೆ

ಹಾನಗಲ್ಲ :

       ಕೇಂದ್ರ ಸಚಿವ ದಿ. ಎಚ್.ಎನ್.ಅನಂತಕುಮಾರ ಅವರ ಸರ್ವಜನ ಶ್ರದ್ಧಾಂಜಲಿ ಸಭೆ ಹಾನಗಲ್ಲ ಪಟ್ಟಣದ ಉದಾಸಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಶಾಸಕ ಸಿ.ಎಂ.ಉದಾಸಿ ನೇತೃತ್ವದಲ್ಲಿ ನಡೆಯಿತು.

        ಸಭೆಯಲ್ಲಿ ದಿ.ಅನಂತಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೌನಾಚರಣೆ ಮಾಡುವ ಮೂಲಕ ಅಗಲಿದ ಹಿರಿಯ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎಂ.ಉದಾಸಿ, ರಾಜ್ಯ ಮತ್ತು ಕೇಂದ್ರದ ಕೊಂಡಿಯಾಗಿ ದಿ.ಅನಂತಕುಮಾರ ಅವರು ರಾಜ್ಯದ ಹಿತಾಸಕ್ತಿ ಕಾಪಾಡಲು ಪಕ್ಷಾತೀತವಾಗಿ ಶ್ರಮಿಸಿದ ಅಪ್ರತಿಮ ನಾಯಕರಾಗಿದ್ದರು. ರಾಜ್ಯದ ಸಮಸ್ಯೆಗಳನ್ನು ಸಕ್ರೀಯವಾಗಿ ಸರಿಪಡಿಸುವ ಜಾಣ್ಮೆ ಹೊಂದಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಅನಂತಕುಮಾರ ಅವರು ತಮ್ಮ ಕರ್ತವ್ಯದಲ್ಲಿ ಚ್ಯುತಿ ಬಾರದಂದೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ ಅತಿ ಎತ್ತರಕ್ಕೆ ಬೆಳೆದ ವ್ಯಕಿತ್ವ ಅವರದ್ದಾಗಿತ್ತು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

       ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಸಂಘಟನೆ ವಿಷಯದಲ್ಲಿ ಕ್ರಿಯಾಶೀಲ ವ್ಯಕ್ತಿಯಾಗಿ ಬೆಳೆದ ಅನಂತಕುಮಾರಜಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆಗೂಡಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಹೆಮ್ಮರವಾಗಿ ಬೆಳೆಸಲು ಶ್ರಮಿಸಿದವರು. ಕನ್ನಡ ಸ್ಥಾನಮಾನ ಬಗ್ಗೆ ಹಾಗೂ ಕಾವೇರಿ ವಿಷಯದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಾವು ಹತ್ತಿರ ಬಂದರೂ ಸಹಿತ ನಿಷ್ಠೆಯಿಂದ ಕೆಲಸ ಮಾಡಿ ತಮ್ಮ ಜವಾಬ್ದಾರಿಯನ್ನು ನೆರವೇರಿಸಿದವರು. ಜನೌಷಧಿ, ಬಿಸಿಯೂಟ, ರೈತಪರ ಯೋಜನೆಗಳನ್ನು ಜಾರಿಗೊಳಿಸಿದವರು. ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅನಂತಕುಮಾರ ಅವರ ಅಗಲಿಕೆ ಪಕ್ಷದ ಕಾರ್ಯಕರ್ತರಿಗೆ ನೋವು ತಂದಿದೆ ಎಂದರು.

     ಮುಖಂಡರಾದ ಮಾಲತೇಶ ಸೊಪ್ಪಿನ, ಎ.ಎಸ್.ಬಳ್ಳಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಎಂ.ಬಿ.ಕಲಾಲ, ಬಿ.ಎಸ್.ಅಕ್ಕಿವಳ್ಳಿ, ಪದ್ಮನಾಭ ಕುಂದಾಪೂರ, ಶಿವಲಿಂಗಪ್ಪ ತಲ್ಲೂರ, ಬಸವರಾಜ ಬೂದಿಹಾಳ, ಡಾ.ಸುನೀಲ ಹಿರೇಮಠ, ಶೇಕಪ್ಪ ಮಹರಾಜಪೇಟಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link