ಬಿಜೆಪಿ ಕಚೇರಿಯಲ್ಲಿ ಕನಕ ಜಯಂತಿ

ಚಿತ್ರದುರ್ಗ:

     ಬಿಜೆಪಿ.ಕಚೇರಿಯಲ್ಲಿ ಸಂತಶ್ರೇಷ್ಟ ಕನಕದಾಸರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.ನಟ ಅಂಬರೀಷ್ ಹಾಗೂ ಕೇಂದ್ರದ ಮಾಜಿ ರೈಲ್ವೆ ಮಂತ್ರಿ ಸಿ.ಕೆ.ಜಾಫರ್‍ಷರೀಫ್‍ರವರ ನಿಧನ ಪ್ರಯುಕ್ತ ಮೂರು ದಿನಗಳ ಕಾಲ ಶೋಕಾಚರಣೆಯಿರುವುದರಿಂದ ಸಾಂಕೇತಿಕವಾಗಿ ಆಚರಿಸಲಾದ ಕನಕಜಯಂತಿಯನ್ನುದ್ದೇಶಿಸಿ ಮಾತನಾಡಿದ ಹಿಂದುಳಿದ ಮೋರ್ಚಾ ಅಧ್ಯಕ್ಷ ಸಂಪತ್ ಮೂಢನಂಬಿಕೆ, ಕಂದಾಚಾರ, ಜಾತಿ ಜಾತಿಗಳ ನಡುವೆ ಘರ್ಷಣೆ ನಡೆಯುತ್ತಿರುವ ಇಂದಿನ ದಿನಮಾನಕ್ಕೆ ಕನಕದಾಸರ ಕೀರ್ತನೆ, ಆಚಾರ-ವಿಚಾರಗಳು ಅತ್ಯವಶ್ಯಕವಾಗಿ ಬೇಕು. ಜಾತಿಯತೆಯ ವಿರುದ್ದ ಹೋರಾಡಿದ ಅವರ ತತ್ವ ಸಿದ್ದಾಂತಗಳ ಮೇಲೆ ಎಲ್ಲರೂ ಸಾಗಬೇಕಾಗಿದೆ ಎಂದು ಹೇಳಿದರು.

      ಬುದ್ದ, ಬಸವ, ಏಸು, ಅಂಬೇಡ್ಕರ್, ವಾಲ್ಮೀಕಿ, ಕನಕದಾಸ ಹೀಗೆ ಎಲ್ಲಾ ದಾರ್ಶನಿಕರು ಸಂತರನ್ನು ಒಂದೊಂದು ಜಾತಿಗೆ ಕಟ್ಟಿಹಾಕಲಾಗಿರುವುದು ಸರಿಯಲ್ಲ. ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಬೇಕೆನ್ನುವುದು ಕನಕದಾಸರ ಕನಸಾಗಿತ್ತು. ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಕೀರ್ತನೆಗಳನ್ನು ಹಾಡಿಕೊಂಡು ಸುತ್ತಾಡುತ್ತಿದ್ದವರನ್ನು ಎಲ್ಲರೂ ನೆನಪುಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ.ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‍ಯಾದವ್ ಮಾತನಾಡುತ್ತ ಕನಕದಾಸರ ಕೀರ್ತನೆ, ಹಾಡುಗಳು ಇಂದಿನ ಸಮಾಜಕ್ಕೆ ಅತ್ಯವಶ್ಯಕವಾಗಿ ಬೇಕು. ರಾಜನಾಗಿ, ದಂಡನಾಯಕನಾಗಿ ಇರಬೇಕಾಗಿದ್ದ ಪುರಂದರದಾಸರು ಜಾತಿಯತೆ ವಿರುದ್ದ ಸಿಡಿದೆದ್ದು ಕುಲ ಕುಲ ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ ಬಲ್ಲಿರ ಎನ್ನುವ ಮೂಲಕ ಜಾತಿವಾದಿಗಳ ಮನಪರಿವರ್ತನೆಗೆ ಟೊಂಕಕಟ್ಟಿ ನಿಂತವರು ಎಂದು ಗುಣಗಾನ ಮಾಡಿದರು.

         ಕೀರ್ತನೆಗಳ ಮೂಲಕ ನಾಡಿಗೆ ಹೆಸರುವಾಸಿಯಾಗಿದ್ದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗಿದೆ. ಅದೇ ರೀತಿ ಎಲ್ಲಾ ದಾರ್ಶನಿಕರು, ಶರಣರು, ಸಂತರು, ಮಹಾತ್ಮರನ್ನು ಒಂದೊಂದು ಜಾತಿಯವರು ಹಿಡಿದಿಟ್ಟುಕೊಂಡಿರುವುದು ನೋವಿನ ಸಂಗತಿ. ವರ್ಷಕ್ಕೊಮ್ಮೆ ದಾರ್ಶನಿಕರನ್ನು ನೆನಪುಮಾಡಿಕೊಳ್ಳುವ ಬದಲು ಜೀವನವಿಡಿ ಅವರ ಸಂದೇಶ ಆಚಾರ ವಿಚಾರಗಳನ್ನು ಪಾಲನೆ ಮಾಡಬೇಕು ಎಂದರು.

         ವಿಭಾಗೀಯ ಸಹಪ್ರಭಾರಿ ಜಿ.ಎಂ.ಸುರೇಶ್, ಎಂ.ಪಿ.ಗುರುರಾಜ್, ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಶಿವಣ್ಣಾಚಾರ್, ನಗರಸಭೆ ಸದಸ್ಯರುಗಳಾದ ಹರೀಶ್, ಶಶಿ, ಪರಮೇಶ್, ಬಿಜೆಪಿ.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲಾಶಿವಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರತ್ನಮ್ಮ, ಮುರಳಿ, ಬಸಮ್ಮ, ರೇಖ, ರವಿಶಂಕರ್, ಪರಮೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap