ಹಾನಗಲ್ಲ :
ತಾಲೂಕು ಆಡಳಿತ ಹಾಗೂ ಪ್ರದೇಶ ಕುರುಬರ ಸಂಘ ಹಾನಗಲ್ಲ ತಾಲೂಕು ಘಟಕದ ಸಹಯೋಗದಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಸೋಮವಾರ ಪಟ್ಟಣದ ಕನಕ ಉದ್ಯಾನವನದಲ್ಲಿರುವ ಮಹಾತ್ಮಾ ಕನಕದಾಸರ ಪುತ್ಥಳಿಗೆ ತಾಲೂಕು ತಹಶೀಲ್ದಾರ ಎಂ.ಗಂಗಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರದೇಶ ಕುರುಬರ ಸಂಘ ಹಾನಗಲ್ಲ ತಾಲೂಕು ಘಟಕದ ಅಧ್ಯಕ್ಷ ಸುರೇಶ ದೊಡ್ಡಕುರುಬರ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಸಮಾಜದ ಮುಖಂಡರಾದ ಭೋಜರಾಜ ಕರೂದಿ, ದಾನಪ್ಪ ಗಂಟೇರ, ಗಣೇಶ ದೇಸಾಯಿ, ಮಲ್ಲೇಶಪ್ಪ ಕೋಣನಕೇರಿ, ಮುತ್ತಣ್ಣ ಪೂಜಾರ, ಭರ್ಮಣ್ಣ ಸಿರ್ಸಿ, ಮಾಯಣ್ಣ ಮಂತಗಿ, ನಿಂಗಪ್ಪ ಪೂಜಾರ, ರಾಘವೇಂದ್ರ ಕಾಮನಹಳ್ಳಿ, ಸಂಜು ಗುಡಿಕೇರಿ, ಕೋಟೆಪ್ಪ ಮಂತಗಿ, ಅಧಿಕಾರಿಗಳಾದ ಎಚ್.ಎನ್.ಭಜಕ್ಕನವರ, ಮಾಲತೇಶ ಬಾಕಿ ಮೊದಲಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ