ಮೂರು ದಿನಗಳ ವಿಶೇಷ ನೋಂದಣಿ ಅಭಿಯಾನ

ಹಾನಗಲ್ಲ :

         ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ನಡೆದಿರುವ ವಿಶೇಷ ನೋಂದಣಿ ಅಭಿಯಾನದ ಪ್ರಕ್ರಿಯೆಗಳನ್ನು ತಾಲೂಕು ತಹಶೀಲ್ದಾರ ಎಂ.ಗಂಗಪ್ಪ ವೀಕ್ಷೀಸಿ ಪರಿಶೀಲಿಸಿದರು.

          ಈ ಸಂದರ್ಭದಲ್ಲಿ ವಿವರ ನೀಡಿದ ತಹಶೀಲ್ದಾರ ಎಂ.ಗಂಗಪ್ಪ, ಮೂರು ದಿನಗಳ ವಿಶೇಷ ನೋಂದಣಿ ಅಭಿಯಾನದ ಅಂಗವಾಗಿ ತಾಲೂಕಿನ 239 ಮತಗಟ್ಟೆಗಳಲ್ಲಿ ಭೂತ ಮಟ್ಟದ ಅಧಿಕಾರಿಗಳು ಅರ್ಜಿ ಸ್ವೀಕಾರ ಕಾರ್ಯದಲ್ಲಿ ತೊಡಗಿಕೊಂಡಿಸದ್ದಾರೆ. ಈ ವರೆಗೆ ಒಟ್ಟು 3345 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ನವಂಬರ 27 ರ ಒಳಗಾಗಿ ಎಲ್ಲ ಅರ್ಜಿಗಳನ್ನು ಇತ್ಯರ್ಥ ಮಾಡಲಾಗುತ್ತದೆ ಎಂದು ವಿವರಿಸಿದ ಅವರು, ಈ ಅಭಿಯಾನದಲ್ಲಿ ಹೊಸ ಮತದಾರ ಸೇರ್ಪಡೆ, ಹೆಸರು ತೆಗೆದು ಕಾಕುವುದು, ತಿದ್ದುಪಡಿ ಮತ್ತು ಮತದಾರ ವರ್ಗಾವಣೆಗೆ ಅವಕಾಶವಿದ್ದು, ಮತದಾರರು ಈ ಅಭಿಯಾನದ ಯಶಸ್ಸಿಗೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.

         ತಾಲೂಕಿನ ಅಕ್ಕಿವಳ್ಳಿ, ಕುಂಟನಹೊಸಳ್ಳಿ, ಅಕ್ಕಿಆಲೂರ, ಗೆಜ್ಜಿಹಳ್ಳಿ ಗ್ರಾಮಗಳಲ್ಲಿ ನಡೆಯುತ್ತಿರುವ ವಿಶೇಷ ನೋಂದಣಿ ಅಭಿಯಾನದ ಪರಿಶೀಲನೆ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link