ಯುವಕರು ದೇಶದ ಸಂಪತ್ತು ಅವರನ್ನು ಸ್ವಯಂ ಜಾಗೃತಿಗೊಳಿಸಿ

ಹಾವೇರಿ

         ನಗರದ ಹೊಯ್ಸಳ ಕೈಗಾರಿಕಾತರಬೇತಿ ಕೇಂದ್ರದಲ್ಲಿ ನಡೆದ ನೆಹರು ಯುವಕೇಂದ್ರ ಹಾಗೂ ಜನವಿಕಾಸ ಫೌಂಡೆಷನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೋಮು ಸೌಹಾರ್ಧ ದಿನ. ಅರಿವು ಕಾರ್ಯಕ್ರಮದಲ್ಲಿ ಎಸ್.ಹೆಚ್.ಮಜೀದ್ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಮುಖ್ಯ ಅಥೀತಿಗಳಾಗಿ ಪ್ರಪಂಚದ ಪ್ರಮುಖ ಧರ್ಮಗಳಾದ ಹಿಂದು ಧರ್ಮ, ಜೈನ ಧರ್ಮ, ಬೌದ್ದ ಧರ್ಮ, ಇಸ್ಲಾಂ ಧರ್ಮ ಇಂತಹ ಧರ್ಮಗಳ ಮೂಲ ಉದ್ಧಶವು ಸಮಾನತೆ ಸಹಕಾರ ಸಹಬಾಳುವೆ ಮತ್ತು ಮಾನವಿಯ ಮೌಲ್ಯಗಳ ಸಾರವಾಗಿವೆ.

       ಮನುಕುಲದ ಎಳೀಗೆವು ಉತ್ತಮ ಸಂಸ್ಕತಿಯ ಹಾಗೂ ಮಾನವಿಯ ಮೌಲ್ಯಗಳ ಪ್ರತಿಕವಾಗಿವೆ, ಯುವಕರು ದೇಶದ ಸಂಪತ್ತು ಸ್ನೇಹ ಸಹಕಾರ ಎಂಬ ವಿಶಾಲವಾದ ಮನೊಭಾವನೆಯನ್ನು ಪ್ರಸ್ತುತ ದಿನಗಳಲ್ಲಿ ಯುವಕರು ಬೆಳೆಸಿಕೊಳ್ಳಬೆಕು ಎಂದು ಜೀಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಎಸ್.ಹೆಚ್.ಮಜೀದ್ ರವರು ಮಾತನಾಡಿದರು.

        ಹಾವೇರಿ ನೆಹರು ಯುವಕೇಂದ್ರದ ಸಂಯೋಜಕರಾದ ವಿಜಯ್ ದಿನೇಶ್ ರವರು ಈ ಕಾರ್ಯಕ್ರಮವನ್ನು ಉದ್ದೆಶಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರುಹಿರಿಯ ಸಾಹಿತಿಗಳಾದ ಶ್ರೀ ಹನುಮಂತಗೌಡ ಗೊಲ್ಲರ್ ಕಾರ್ಯಕ್ರಮವನ್ನು ಉಧ್ಘಾಟಿಸುತ್ತಾ ಭಾರತದ ಸಂಸ್ಕøತಿಯು ಪ್ರಪಂಚದ ಎಲ್ಲಾ ದೇಶಗಳಿಗಿಂತ ಶ್ರೇಷ್ಟವಾದದ್ದು.

      ಉಪ್ಪಿಗಿಂತ ರುಚಿ ಇಲ್ಲಾ ತಾಯಿಗಿಂತs ಬಂಧುವಿಲ್ಲಾ ಎಂಬ ಗಾದೆಮಾತುಗಳ ಮೂಲಕ ವಿಮರ್ಶಾತ್ಮಕವಾಗಿ ಮಾತನಾಡುತ್ತಾ ಜಾತಿ ವ್ಯವಸ್ಥೆ ದೇಶದ ಸಂಸ್ಕ್ರತಿಗೆ ಮಾರಕವಾಗಿದೆ ಜಾತಿಯತೆ ಸಂಕುಚಿತ ಮನೋಭಾವನೆಯಾದೆ ಕೋಮುವಾದವು ದೇಶದ ಪ್ರಗತಿಗೆ ಮಾರಕವಾಗಿದೆ ಪ್ರಸ್ಥುತ ದಿನಗಳಲ್ಲಿ ವಿದ್ಯಾರ್ಥೀಗಳು ಸ್ವಯಂ ಜಾಗೃತರಾಗಬೇಕು, ಒಂದು ದೇಶದ ಭವಿಷ್ಯಯು ತರಗತಿಯ ಕೊಣೆಯಲ್ಲಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು, ನಾವು ನಮ್ಮವರು ಎಂಬ ಮನೊಭಾವನೆಯನ್ನು ಬೆಳೆಸಿ ಕೊಳ್ಳಬೇಕು ,ವಿವಿದತೆಯಲ್ಲಿ ಎಕತೆಯನ್ನು ಸಾರಬೇಕು ರಾಷ್ಟೀಯ ಭಾವ್ಯೆಕತೆ ಎಂಬ ಕಟ್ಟಡವನ್ನು ನೀರ್ಮಾಣ ಮಾಡಲು ಇಟ್ಟಿಗೆ ಮತ್ತು ಗಾರೆಗಳಿಂದ ಸಾದ್ಯವಿಲ್ಲಾ ಆದರೆ ನಾವು ನಮ್ಮವರು ಎಂಬ ಭಾವನೆಗಳಿಂದ ಸಾಧ್ಯವಿದೆ ಎಂಬ ವಿಶಾಲ ಮನೊಭಾವನೆಯನ್ನು ಬೆಳೆಸಿಕೊಳ್ಳುವಂತೆ ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಕುಮಾರ್ ಡಂಬಳ ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಾಡಿದರು

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೊಯ್ಸಳ ಕೈಗಾರಿಕಾ ತರಬೆತಿ ಕೇಂದ್ರ ಪ್ರಾಂಶುಪಾಲರಾದ ಶ್ರೀ ಕೃಷ್ಣ ಜವಳಿ ಮಾತನಾಡುತ್ತಾ ಉತ್ತಮ ಸಂಸ್ಕತಿಯು ಅಭಿವೃದ್ದಿಯ ಸಂಕೇತ, ಯುವ ಜನರಿಗೆ ಸ್ವಯಂ ಅರಿವು ಪ್ರಸ್ತುತ ದಿನಗಳಲ್ಲಿ ತುಂಬಾ ಅವಶ್ಯಕವಾಗಿದೆ ಪ್ರಪಂಚದ ಎಲ್ಲಾ ಧರ್ಮಗಳ ನಿತಿಯು ಮನುಕುಲದ ಎಳಿಗೆಯಾಗಿದೆ. ನಿಮ್ಮ ಎಳಿಗೆಯು ದೇಶದ ಅಭಿವೃದ್ದಿಯ ಸಂಕೇತವಾಗಿದೆಬ ನಾವೆಲ್ಲರು ಒಂದೆ ಎಂಬ ಭಾವನೆಯು ನಮ್ಮಲ್ಲಿ ಮನೆಮಾತಾಗಬೆಕೇಂದು ಯುವಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link