ರಸ್ತೆ ಪೂರ್ಣಗೊಳ್ಳುವ ಮುನ್ನವೆ ಕೆಶಿಪ್‍ ನಿಂದ ಬೈಪಾಸ್‍ ರಸ್ತೆ ಕಾಮಗಾರಿ

ಕೊರಟಗೆರೆ

        ರಾಜ್ಯ ಹೆದ್ದಾರಿ ಮಳವಳ್ಳಿ-ರಾಯದುರ್ಗ ಸಂಪರ್ಕ ಕಲ್ಪಿಸುವಂತಹ ರಸ್ತೆ ಪೂರ್ಣಗೊಳ್ಳುವ ಮುನ್ನವೆ ಕೆಶಿಪ್‍ನ ಅವೈಜ್ಞಾಕ ಬೈಪಾಸ್‍ ರಸ್ತೆ ಕಾಮಗಾರಿಯಿಂದ ಕೊರಟಗೆರೆ ಪಟ್ಟಣ ವ್ಯಾಪ್ತಿಯೊಂದರಲ್ಲಿ 60 ಕ್ಕೂ ಹೆಚ್ಚು ಅಫಘಾತ ಸಂಭವಿಸಸಿ, 28 ಜನ ಮೃತಪಟ್ಟು 45 ಕ್ಕೂ ಹೆಚ್ಚು ಜನ ಕೈಕಾಲು ಮುರಿದುಕೊಂಡ ಪ್ರಕರಣ ಪದೆಪದೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ಹಾಗೂ ಪಿಡಬ್ಲೂಡಿ ಇಲಾಖೆ ಸ್ವತಹ ಜಾಗೃತಿ ವಹಿಸಿ ರಸ್ತೆ ಮದ್ಯೆ ಭಾಗದಲ್ಲಿ ಟ್ರಂಚ್ ಹೊಡೆದು ರಸ್ತೆ ಮುಚ್ಚಿರುವ ಘಟನೆ ಮಂಗಳವಾರ ಕೊರಟಗೆರೆಯಲ್ಲಿ ಜರುಗಿದೆ.

       ಕೊರಟಗೆರೆ ಪಟ್ಟಣದ ಹೊರವಲಯದಲ್ಲಿ ಹಾದುಹೋಗುವ2.5 ಕಿ.ಮೀ ಬೈಪಾಸ್‍ರಾಜ್ಯ ಹೆದ್ದಾರಿಯ ರಸ್ತೆಯೇ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಬೈಪಾಸ್‍ ರಸ್ತೆಯತಿರುವಿನಲ್ಲಿ ಅಪಘಾತದ ಮುನ್ಸೂಚನೆ, ರಾಜ್ಯ ಹೆದ್ದಾರಿಗೆ ಪಾದಚಾರಿ ಮಾರ್ಗವೇ ಇಲ್ಲದ ರೀತಿಯಲ್ಲಿ ಬೈಪಾಸ್‍ರಸ್ತೆಗೆ ಸಂಪರ್ಕ ಕಲ್ಪಿಸಿರುವುದರ ವಿರುದ್ದ ಸಾರ್ವಜನಿರು ಆಕ್ರೋಶ ಹಾಗೂ ಸರಣಿಅಪಘಾತ ಹಿನ್ನೆಲೆಯಲ್ಲಿಕೊರಟಗೆರೆ ಸಿಪಿಐ ಮುನಿರಾಜು ಹಾಗೂ ಪಿಡಬ್ಲೂಡಿ ಎಇಇ ಜಗದೀಶ್ ಸಹಯೋಗದಲ್ಲಿ ಬೈಪಾಸ್‍ರಸ್ತೆಯ ಪ್ರಾರಂಭದ ಎರಡೂ ಕಡೆ ಜೆಸಿಬಿಯಲ್ಲಿ ಮಣ್ಣು ಹೊಡೆದು ಟ್ರಂಚ್ ಹೊಡೆಯುವ ಮೂಲಕ ರಸ್ತೆ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ..

         ಪಟ್ಟಣದ ಹೊರವಲಯದ ಮೂಲಕ ಮಧುಗಿರಿಕಡೆಯಿಂದ ಬೆಂಗಳೂರು ಹಾಗೂ ತುಮಕೂರು ಹಾದುಹೋಗುವ ಬೈಪಾಸ್‍ ರಸ್ತೆಯು ಅವೈಜ್ಞಾನಿಕವಾಗಿದ್ದು , ಕಳೆದ ಭಾನುವಾರಇದೇ ಸ್ಥಳದಲ್ಲಿ ಅಪಘಾತ ಆಗಿ ತಂದೆಮಗ ಮೃತ ಪಟ್ಟಿದ್ದಾರೆ.  ಇದೆ ಸ್ಥಳದಲ್ಲಿ 20 ಕ್ಕೂ ಹೆಚ್ಚು ಅಪಘಾತ ಸಂಭವಿಸಿ 8ಜನ ಮೃತ ಪಟ್ಟಿದ್ದಾರೆ, ಈ ರಸ್ತೆಯ 3 ತಿರುವುಗಳಲ್ಲಿ ಮುನ್ಸೂಚನೆಯ ನಾಮಫಲಕ, ಹಂಪ್ಸ್ ಹಾಗೂ ಸಿಗ್ನಲ್ ಲೈಟ್ಸ್‍ ಇಲ್ಲದ ಕಾರಣ ವಾಹನ ಸವಾರರಿಗೆ ಸಮರ್ಪಕ ಮಾಹಿತಿ ಕೊರತೆಯಿಂದ ಅಫಘಾತಗಳು ಸಂಬವಿಸಿ ಸಾವು ನೋವುಗಳು ಸಂಬಿಸುತ್ತಿರುವ ಕಾರಣ ಪೋಲಿಸ್ ಇಲಾಖೆ ಹಾಗೂ ಲೋಕೊಪಯೋಗಿ ಇಲಾಖೆ ಅಪಘಾತ ತಡೆಯುವ ಉದ್ದೇಶದಿಂದ ಹಾಗೂ ಕೆಶಿಪ್ ಸಮರ್ಪಕ ರಸ್ತೆ ಸಂಪರ್ಕ ಕಲ್ಪಿಸುವವರೆಗೂ ರಸ್ತೆಗೆ ಸಂಪರ್ಕ ಕಲ್ಪಿಸದ ರೀತಿಯಲ್ಲಿ ಈ ಇಲಾಖೆಗಳು ಬೈಪಾಸ್‍ ರಸ್ತೆಗೆ ಮಣ್ಣು ಸುರಿದು ಸಂಪರ್ಕ ಕಡಿತಗೊಳಿಸಿದೆ.

       ಬೈಪಾಸ್‍ ರಸ್ತೆಯಲ್ಲಿ ಬೆಂಗಳೂರು ಮಾರ್ಗದಿಂದ ಬರುವ ರಾಘವೇಂದ್ರ ಶಾಲೆಯ ಸಮೀಪ, ಡಿಗ್ರಿಕಾಲೇಜು ಸಮೀಪದ ತಿರುವು, ಬೋಡಬಂಡೇನಹಳ್ಳಿ, ಮಲ್ಲೇಕಾವು ಸಂಪರ್ಕದ ರಸ್ತೆ, ಗೌರಿಬಿದನೂರು ತಿರುವು, ವಡ್ಡಗೆರೆ ಮಾರ್ಗ ಮತ್ತು ಸಿದ್ದೇಶ್ವರ ಕಲ್ಯಾಣ ಮಂಟಪದರಸ್ತೆಗೆ ರಸ್ತೆಗಳಲ್ಲಿ 4 ಭಾಗಗಳಿಂದ ರಸ್ತೆಗಳಲ್ಲಿ ಮುನ್ಸೂಚನಾ ಫಲಕ ಹಾಗೂ ಹಂಪ್ಸ್‍ಗಳಿಲ್ಲದೆ ಅಫಘಾತಗಳು ಸಂಬವಿಸುತ್ತಿದ್ದು, ರಾತ್ರಿಯ ವೇಳೆರಸ್ತೆಯ ಮಾರ್ಗವೇ ಕಾಣದೇ ವಾಹನ ಸವಾರರು ಮೋರಿ ಹಾಗೂ ಡಿವೈಡೆರ್‍ಗಳಿಗೆ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿ ಆಸ್ಪತ್ರೆಗೆ ಸೇರುವುದು ಸಾಮಾನ್ಯವಾಗಿದೆ.

         ಕೊರಟಗೆರೆ ಪಟ್ಟಣದ ಬೈಪಾಸ್‍ ರಸ್ತೆ ಪೂರ್ಣಗೊಳ್ಳದೆ ಅಪೂರ್ಣ ಹಂತದಲ್ಲಿ 50 ಕ್ಕೂ ಹೆಚ್ಚು ಸಾವು ನೋವುಗಳು ಸಂಭವಿಸಿದ್ದರೂ ಕೆಶಿಪ್ ನನಗೂ ಅಫಘಾತಕ್ಕೂ ಸಂಬಂದವೇ ಇಲ್ಲ ಎಂಬ ರೀತಿಯಲ್ಲಿ ಯಾವುದೆ ಮುನ್ನೆಚ್ಚರಿಕ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿರುವುದರ ವಿರುದ್ದ ಇತ್ತೀಚೆಗೆ ಸಂಸದ ಮುದ್ದಹನುಮೇಗೌಡ ಅಸಮದಾನ ವ್ಯಕ್ತಪಡಿಸಿ ಕೆಶಿಪ್ ನ ಅವೈಜ್ಞಾನಿಕರಸ್ತೆ ನಿರ್ಮಾಣದ ವಿರುದ್ದ ಸಂಬಂಧ ಪಟ್ಟ ಇಲಾಖೆಗೆ ಇದರ ವಿರುದ್ದಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾದರೂ ಕೆಶಿಪ್ ಗಮನ ಹರಿಸದ ಕಾರಣ ಮಂಗಳವಾರದಂದು ಪೋಲಿಸ್ ಇಲಾಖೆ ಹಾಗೂ ಲೋಕೊಪಯೋಗಿ ಜಂಟಿ ಕಾರ್ಯಾಚರಣೆಯಲ್ಲಿ ಮುಂದಾಗುವ ಅನಾಹುತ ತಪ್ಪಿಸುದೃಷ್ಟಿಯಿಂದ ಬೈಪಾಸ್‍ ರಸ್ತೆಯನ್ನು ಮುಚ್ಚಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link