ಆಹಾರ ಇಲಾಖೆಯಿಂದ “ಈಟ್‌ ರೈಟ್‌ ” ಅಭಿಯಾನ….!

ಬೆಂಗಳೂರು

    ನಗರ ಪ್ರದೇಶದ ಜನರಿಗೆ ಸ್ಟ್ರೀಟ್​ ಫುಡ್​ ಅಚ್ಚುಮೆಚ್ಚು. ಸಂಜೆ ಆಗುತ್ತಲೇ ಮನಸ್ಸು ಫುಡ್​ ಸ್ಟ್ರೀಟ್​​ಗಳತ್ತ ಸೆಳೆಯುತ್ತದೆ. ಭರ್ಜರಿ ಅಲ್ಲದಿದ್ದರೂ ಒಂದು ಪ್ಲೇಟ್ ಮಸಾಲೆ, ಒಂದು ಪ್ಲೇಟ್​ ಬಿಸಿ ಬಿಸಿ ಗೋಬಿ ಮಂಚೂರಿ ತಿಂದರೆ ಅದೇನೋ ಆನಂದ. ಆದರೆ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಗೋಬಿ ಮಂಚೂರಿ, ಪಾನಿ ಪುರಿ ಹೀಗೆ ನಾನಾ ಆಹಾರವಸ್ತುಗಳು ಭಾಗಶಃ ನಿಷೇಧಿಸಲ್ಪಟ್ಟಿವೆ. ಕೆಲ ವರ್ಗದ ಗ್ರಾಹಕರಂತೂ ಸ್ಟ್ರೀಟ್​ ಫುಡ್​ ಬಗ್ಗೆ ಅನುಮಾನ ಹೊರಹಾಕುತ್ತಿದ್ದಾರೆ.

    ನಿಷೇಧದ ಬಿಸಿ ವ್ಯಾಪಾರಿಗಳಿಗೂ ತಟ್ಟಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಅಲ್ಲದಿದ್ದರೂ, ವ್ಯಾಪಾರ ಕೊಂಚ ಕಡಿಮೆ ಆಗಿದೆ. ಇಂತಹ ಸಂಕಷ್ಟದ ಹೊತ್ತಿನಲ್ಲಿ ವ್ಯಾಪಾರಿಗಳ ಬದುಕಿಗೆ ಆಸರೆ ಆಗಲು ಆರೋಗ್ಯ ಇಲಾಖೆ ಮುಂದಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವಿಶೇಷ ತರಬೇತಿ ಆರಂಭಿಸಿದೆ. ಸುರಕ್ಷತೆಯ ಪಾಠ ಹೇಳಿ ಕೊಡುತ್ತಿದೆ.

   ಆರೋಗ್ಯ ಇಲಾಖೆಯಡಿ ಆಹಾರ ಮತ್ತು ಸುರಕ್ಷತಾ ಇಲಾಖೆ ಈ ಸ್ಪೆಷಲ್​ ಟ್ರೈನಿಂಗ್​ ಆರಂಭಿಸಿದೆ. ಈಗಾಗಲೇ 4 ಸಾವಿರಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ನೀಡಿದೆ. ಯಾವ ಪದಾರ್ಥ ಬಳಸಬೇಕು, ಕೃತಕ ಬಣ್ಣ ಬಳಸಬಾರದು, ಸ್ವಚ್ಛತೆ ಕಾಪಾಡ ಬೇಕು ಎಂಬಿತ್ಯಾದಿ ಟ್ರೈನಿಂಗ್​ ನೀಡಿದೆ.

10 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ತರಬೇತಿ ನೀಡಲು ಕೇಂದ್ರ ಸರ್ಕಾರ ಈ ಹಿಂದೆಯೇ ತೀರ್ಮಾನಿಸಿತ್ತು. ಇದೀಗ ಕರ್ನಾಟಕ ಆರೋಗ್ಯ ಇಲಾಖೆ ಕೂಡ ವಿಶೇಷ ತರಬೇತಿ ನೀಡುತ್ತಿದ್ದು, ಇದು ಗ್ರಾಹಕರಿಗೆ ಆರೋಗ್ಯಕರ ಆಹಾರ ನೀಡುವಲ್ಲಿ ಮುಖ್ಯವಾದದ್ದಾಗಲಿದೆ.

Recent Articles

spot_img

Related Stories

Share via
Copy link