ಎಪಿಎಂಸಿ ಯಲ್ಲಿ ಈರುಳ್ಳಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯ

ಜಗಳೂರು 

          ಪಟ್ಟಣದ ಎಪಿಎಂಸಿ ಯಲ್ಲಿ ಈರುಳ್ಳಿ ಖರೀದಿ ಕೇಂದ್ರ ತೆರೆಯುವಂತೆ ಮಾಜಿ ಎಂಪಿಎಂಸಿ ಅಧ್ಯಕ್ಷ ಹಾಲಿ ಸದಸ್ಯರಾದ ಎನ್.ಎಸ್.ರಾಜು ಸರ್ಕಾರಕ್ಕೆ ಒತ್ತಾಯಿಸಿದರು.

        ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯ ನ್ನುದ್ದೇಶಿಸಿ ಮಾತನಾಡಿದರು.ಈರುಳ್ಳಿ ದರ ಕುಸಿತದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಮಂತ್ರಿ ಕುಮಾರ ಸ್ವಾಮಿಯವರು ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ತೆರೆದು 700 ರೂ. ಬೆಂಬಲ ಬೆಲೆ ಹಾಗೂ 200 ರೂ. ಪ್ರೋತ್ಸಾಹ ಧನ ನೀಡಲು ಸೂಚಿಸಿದ್ದಾರೆ. ಈ ಹಿಂದೆ ಜಗಳೂರು ಎಪಿಎಂಸಿಯಲ್ಲಿ ಈರುಳ್ಳಿ ಖರೀದಿ ಕೇಂದ್ರವನ್ನು ತೆರೆಯಲಾಗಿತ್ತು, ಈ ಭಾರಿಯೂ ಖರೀದಿ ಕೇಂದ್ರ ತೆರೆಯ ಬೇಕೆಂಬುದು ಸದಸ್ಯರ ಒತ್ತಾಯವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೇ ಜಗಳೂರು ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ ಅತೀ ಹೆಚ್ಚು ಈರುಳ್ಳಿಯನ್ನು ಬೆಳೆಯಲಾಗುತ್ತಿದ್ದು, ತಾಲೂಕು ಕೇಂದ್ರದಲ್ಲಿ ಖರೀದಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗಲಿದೆ ಎಂದರು.

         ಕೇಂದ್ರ ಸರ್ಕಾರವು ಮೆಕ್ಕೆಜೋ ಳಕ್ಕೆ 1700 ರೂ. ಬೆಂಬಲ ಬೆಲೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಅನೇಕ ಭಾರಿ ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯುವಂತೆ ಪತ್ರ ಬರೆಯಲಾಗಿದೆ. ರೈತರು ಬೆಳೆದ ಬೆಳೆ ಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕೆಂಬು ದು ಎಪಿಎಂಸಿ ಸದಸ್ಯರ ಒತ್ತಾಯವಾಗಿದೆ ಎಂದರು.

         ಈ ಹಿಂದೆ ಬೆಳೆ ವಿಮೆ ಮಾಡಿಸಿದ್ದ ಯಾವೊಬ್ಬ ರೈತರಿಗೂ ಬೆಳೆ ವಿಮೆ ಬಂದಿಲ್ಲ, ಆದ್ದರಿಂದ ಈ ಭಾರಿ ಬೆಳೆ ವಿಮೆ ಮಾಡಿಸಲು ರೈತರು ಮುಂದೆ ಬಾರದಿರುವುದು ವಿಷಾಧನೀಯವಾಗಿದೆ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಬೆಳೆ ವಿಮೆ ಮಾಡಿದ ರೈತರಿಗೆ ವಿಮೆ ಕೊಡಿ ಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಯವರೊಂದಿಗೆ ಚರ್ಚಿಸಿ ಫಸಲ್‍ಭಿಮಾ ಅಡಿಯಲ್ಲಿ ವಿಮೆ ಕೊಡಿಸಲು ಮುಂದಾ ಗಬೇಕು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರಾದ ಎಸ್.ಕೆ.ರಾಮರೆಡ್ಡಿ, ಸಿದ್ದೇಶ್, ಮಲ್ಲಿಕಾರ್ಜುನ್ ಸೇರಿದಂತೆ ಮುಖಂ ಡರಾದ ಜಯ್ಯಣ್ಣ, ಇಬ್ರಾಹಿಂ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link